
ಅರಂಬೂರು ಸರಳಿಕುಂಜ ಬಳಿ ಇಯೋನ್ ಕಾರೊಂದು ಅರಂಭೂರು ತಿರುವಿನಲ್ಲಿ ತಿರುಗಲು ಯತ್ನಿಸಿದಾಗ ಅದರ ಹಿಂದೆ ಇದ್ದ ಮಾರುತಿ ಕಾರ್ ಬ್ರೇಕ್ ಹಾಕಿದ್ದು, ಅದರ ಹಿಂದೆ ಬರುತ್ತಿದ್ದ ಬೈಕ್ ಸವಾರ ಕಾರಿಗೆ ಗುದ್ದಿ , ಎದರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದು ಗಂಭೀರ ಗಾಯವಾದ ಘಟನೆ ಇದೀಗ ವರದಿಯಾಗಿದೆ.


ಬೈಕ್ ಸವಾರ ಸುಳ್ಯದ ಗಾಂಧೀ ನಗರದಲ್ಲಿ ಕಬ್ಬಿಣ ಕೆಲಸ ಮಾಡುತ್ತಿದ್ದು ಗೂನಡ್ಕದ ಪೆರೊಂಗೋಡಿ ಯವರು ಎಂದು ತಿಳಿದುಬಂದಿದೆ.
