
ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪ ಹೊಸಮಠ ದೇರಾಜೆ ಬಳಿ ಜೀಪು ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತವಾಗಿದ್ದು ಸ್ಕೂಟರ್ ನಲ್ಲಿದ್ದ ಮೂವರು ಸಿನಿಮೀಯ ರೀತಿಯಲ್ಲಿ ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ.ಈ ಘಟನೆ ಫೆ.24 ರ ಮದ್ಯಾಹ್ನ ನಡೆದಿದ್ದು ಹೊಸಮಠದಿಂದ ತೆರಳುತ್ತಿದ್ದ ಸ್ಕೂಟರ್ ದೇರಾಜೆ ಕ್ರಾಸ್ ಬಳಿ ಮುಖ್ಯ ರಸ್ತೆಗೆ ಬರುತ್ತಿದ್ದ ಜೀಪಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಮೂವರು ಎಸೆಯಲ್ಪಟ್ಟಿದ್ದು , ಸವಾರ ಜೀಪಿನ ಬಾನೆಟ್ ಮೇಲೆ ಬಿದ್ದರೆ ಮತೋರ್ವ ಸವಾರೆ ಜೀಪಿನ ಇನ್ನೊಂದು ಭಾಗಕ್ಕೆ ಎಸೆಯಲಟ್ಟು ಪವಾಡ ಸದೃಶವಾಗಿ ಪ್ರಾಣ ಹಾನಿ ತಪ್ಪಿದೆ.ನೆಲ್ಯಾಡಿಯತ್ತ ಜೀಪು ಚಲಾಯಿಸುತ್ತಿದ್ದ ಖಾದರ್ ದೇರಾಜೆ ಕ್ರಾಸ್ ಬಳಿ ದೋಣಿಗಂಡಿಯ ಗಣೇಶ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಕಡಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಸವಾರ ಸೇರಿ ಮೂವರು ಸ್ಕೂಟರ್ ನಲ್ಲಿ ತೆರಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದ್ದು ಯಾವುದೇ ಸಂಚಾರಿ ನಿಯಮ ಪಾಲಿಸದೆ ವಾಹನ ಚಲಾಯಿಸುವುತ್ತಿರುವುದು ಕಂಡು ಬಂದಿದೆ.ಅಪಘಾತದ ಮಾಹಿತಿ ತಿಳಿದು ಘಟ್ನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬಳಿಕ ಈ ಪ್ರಕರಣ ರಾಜಿಯಲ್ಲಿ ಇತ್ಯಾರ್ಥವಾಗಿದೆ ಎಂದು ತಿಳಿದುಬಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.