ಪಣಂಬೂರು ಬೀಚ್ ನಲ್ಲಿ ನೀರಾಟ ಆಡಲು ಸಮುದ್ರಕ್ಕಿಳಿದ ವಿಧ್ಯಾರ್ಥಿ ನೀರುಪಾಲು

ಪಣಂಬೂರು ಬೀಚ್ ನಲ್ಲಿ ನೀರಾಟ ಆಡಲು ಸಮುದ್ರಕ್ಕಿಳಿದ ವಿಧ್ಯಾರ್ಥಿ ನೀರುಪಾಲು

ಮಂಗಳೂರು : ಶನಿವಾರ ಮಧ್ಯಾಹ್ನ ವೇಳೆ ಪಣಂಬೂರು ಸಮುದ್ರದಲ್ಲಿ ಆಟವಾಡಲು ಇಳಿದ ವಿಧ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ನಡೆದಿದೆ.ಮೃತ ಬಾಲಕನನ್ನು ಉತ್ತರ ಕರ್ನಾಟಕ ಮೂಲದ ತುಕರಾಮ(13) ಎಂದು ಗುರುತಿಸಲಾಗಿದೆ.

ಈತ ಬೈಕಂಪಾಡಿಯ ಮೀನಕಳಿಯ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದು, ಶಾಲೆ ಬಿಟ್ಟ ಬಳಿಕ ತನ್ನ ಸ್ನೇಹಿತನೊಂದಿಗೆ ಪಣಂಬೂರು ಬೀಚ್ ಗೆ ಬಂದಿದ್ದ.ನೀರಾಟವಾಡುತ್ತಿದ್ದಾಗ ಬೃಹತ್ ಅಲೆಗೆ ಕೊಚ್ಚಿಹೋಗಿ ಮುಳುಗಿ ನಾಪತ್ತೆಯಾಗಿದ್ದಾನೆ. ಬೀಚ್ ನಲ್ಲಿ ವಿದ್ಯಾರ್ಥಿ ಮುಳುಗುತ್ತಿರುವುದನ್ನು ಕಂಡ ಇತರರು ರಕ್ಷಣಾ ದಳಕ್ಕೆ ತಿಳಿಸಿದ್ದಾರೆ. ತತ್ ಕ್ಷಣ ಜೆಟ್ ಸ್ಕೀ ಮೂಲಕ ಕಾಪಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ .

ಬಾಲಕ ಉತ್ತರ ಕರ್ನಾಟಕದ ಮೂಲದವರಾಗಿದ್ದು, ಕೆಲ್ಸದ ನಿಮಿತ್ತ ಈತನ ಪೋಷಕರು ಬೈಕಂಪಾಡಿ ಬಳಿಯ ಮೀನಕಳಿಯ ಬಳಿ ವಾಸವಿದ್ದಾರೆ. ಘಟನೆ ಕುರಿತು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯ