ಎಸ್‌ಕೆಎಸ್ಎಸ್ಎಫ್ ಅಜ್ಜಾವರ ಶಾಖೆ ವತಿಯಿಂದ ಸ್ಥಾಪಕ ದಿನಾಚರಣೆ.

ಎಸ್‌ಕೆಎಸ್ಎಸ್ಎಫ್ ಅಜ್ಜಾವರ ಶಾಖೆ ವತಿಯಿಂದ ಸ್ಥಾಪಕ ದಿನಾಚರಣೆ.

ಸುಳ್ಯ:ಅಜ್ಜಾವರ ಶಾಖೆ ಎಸ್‌ಕೆಎಸ್ಎಸ್ಎಫ್ ವತಿಯಿಂದ ಸ್ಥಾಪಕ ದಿನಾಚರಣೆ ನಡೆಯಿತು. ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಪೇರಡ್ಕ ಜುಮಾ ಮಸೀದಿ ಖತೀಬರಾದ
ರಿಯಾಝ್ ಫೈಝಿ ಎಮ್ಮೆಮ್ಮಾಡು ಮಖಾಂ ಝಿಯಾರತ್‌ಗೆ ನೇತೃತ್ವವನ್ನು ವಹಿಸಿ ಸಂದೇಶ ಭಾಷಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಲೀಲ್ ದಾರಿಮಿ ಮಾಡನ್ನೂರ್ ಅಬ್ಬಾಸ್ ಅನ್ಸಾರಿ ಅಜ್ಜಾವರ ಶರೀಫ್ ರಿಲಾಕ್ಸ್ ಶಾಫಿ ಮಡಿಕೇರಿ,ಶರೀಫ್ ಸಿಎ,ಹಸೈನಾರ್ ಸ್ವರ್ಣಂ, ಸೈಫುಲ್ಲಾ ಕೆ.ಎಚ್.ಖಾದರ್ ಎನ್,ಅಬೂಬಕ್ಕರ್ ಸಿಎ ಹಾಗೂ ಎಸ್‌ಕೆಬಿವಿ ಪದಾಧಿಕಾರಿಗಳು ಮದ್ರಸ ವಿದ್ಯಾರ್ಥಿಗಳು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಮಾಅತ್ ಕಾರ್ಯದರ್ಶಿ ಶಾಫಿ ಮುಕ್ರಿ ‌ಸ್ವಾಗತಿಸಿ ವಂದಿಸಿದರು.

ರಾಜ್ಯ