ಮರ್ದಾಳ ಬಳಿ ಬೈಕ್ ಗೆ ಡಿಕ್ಕಿ ಹೊಡೆದ ಬಸ್-ಕೊಂಬಾರಿನ ಸವಾರನಿಗೆ ಗಂಭೀರ ಗಾಯ

ಮರ್ದಾಳ ಬಳಿ ಬೈಕ್ ಗೆ ಡಿಕ್ಕಿ ಹೊಡೆದ ಬಸ್-ಕೊಂಬಾರಿನ ಸವಾರನಿಗೆ ಗಂಭೀರ ಗಾಯ

ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಬಳಿ ಸೋಮವಾರ ನಡೆದಿದೆ.

ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಕಡಬ ತಾಲೂಕು ಕೊಂಬಾರು ಮಣಿಭಂಡದ ಮ್ಯಾಕನಿಕ್ ವಾಸು ಎಂದು ಗುರುತಿಸಲಾಗಿದೆ.ಕೆ ಎಸ್. ಆರ್ ಟಿ ಸಿ ಬಸ್ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುನಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.ಇನ್ನು ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಬಂದಿರುವ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭಿಸಿಲ್ಲ.ಹೆಚ್ಚುವರಿ ಮಾಹಿತಿ ಒದಗಿದ ಕೂಡಲೇ ಪರಿಷ್ಕರಿಸಿ ಸುದ್ದಿ ಪ್ರಕಟಿಸಲಾಗುವುದು.

ರಾಜ್ಯ