ಚಾರ್ಮಾಡಿ : ನಿಯಂತ್ರಣ ತಪ್ಪಿ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಕಾರು ಅಪಘಾತ : ಪ್ರಯಾಣಿಕರು ಪಾರು

ಚಾರ್ಮಾಡಿ : ನಿಯಂತ್ರಣ ತಪ್ಪಿ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಕಾರು ಅಪಘಾತ : ಪ್ರಯಾಣಿಕರು ಪಾರು

ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಇಪ್ಪತ್ತು ಅಡಿ ಆಳದ ಹೊಳೆಗೆ ಬಿದ್ದ ಘಟನೆ ನಡೆದಿದೆ.

ನಾಲ್ವರು ಪ್ರವಾಸಿಗರಿದ್ದ ಕಾರು ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಪ್ಪತ್ತು ಅಡಿಗೆ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯ