
ಕೊಡಗು ಸಂಪಾಜೆಯ ಪೆಟ್ರೋಲ್ ಪಂಪ್ ನ ಬಳಿ ಕಾರು- ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಇಂದು ಸಂಜೆ ನಡೆದಿದೆ .

ಸುಳ್ಯದಿಂದ ಮಡಿಕೇರಿ ಹೋಗುವ ಟಾಟಾ ಅಲ್ಟ್ರೋಜನ್ ಮತ್ತು ಸುಳ್ಯಕ್ಕೆ ಬರುವ ಇಕೋ. ವ್ಯಾನ್ ಮದ್ಯೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ವಾಹನಗಳು ಜಖಂಗೊಂಡಿದೆ ಎಂದು ತಿಳಿದು ಬಂದಿದೆ.