ಉಡುಪಿ: ಪರೀಕ್ಷಾ ಕೊಠಡಿಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿ ಕ್ಲಾಸ್ ರೂಂನಿಂದ ಜಿಗಿದು ಆತ್ಮಹತ್ಯೆ

ಉಡುಪಿ: ಪರೀಕ್ಷಾ ಕೊಠಡಿಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿ ಕ್ಲಾಸ್ ರೂಂನಿಂದ ಜಿಗಿದು ಆತ್ಮಹತ್ಯೆ

ಉಡುಪಿ: ಮಣಿಪಾಲದ ಕಾಲೇಜ್ ನಲ್ಲಿ ಪರೀಕ್ಷೆಯ ವೇಳೆ ಮೊಬೈಲ್ ಬಳಕೆ ಮಾಡಿ ಪರೀಕ್ಷಾ ಕೊಠಡಿಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿ ಮನನೊಂದು ಕ್ಲಾಸ್ ರೂಂನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಬಿಹಾರ ಮೂಲದ ಸತ್ಯಂ ಸುಮನ್ (20) ಎಂದು ತಿಳಿದು ಬಂದಿದೆ.ಮಧ್ಯಾಹ್ನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಸತ್ಯಂ ಸುಮನ್ ಮೊಬೈಲ್‌ ಬಳಕೆ ಮಾಡಿದ್ದಾನೆ. ಇದನ್ನು ಕಂಡ ಶಿಕ್ಷಕರು ಆತನನ್ನು ಪರೀಕ್ಷಾ ಕೊಠಡಿಯಿಂದ ಹೊರ ಹಾಕಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ