ಸುಳ್ಯ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು

ಸುಳ್ಯ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು

ಸುಳ್ಯ : ಅಪರಾಧ ಕ್ರಮಾಂಕ 36/2018 ಕಲಂ 20(ಬಿ)(2)(ಎ) ಎನ್ ಡಿ ಪಿ ಎಸ್ ಪ್ರಕರಣದ ಆರೋಪಿಯಾಗಿ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ಧ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಹಾಸನ ಜಿಲ್ಲೆಯ ನಿವಾಸಿ ಸಾಧಿಕ್ ಶರೀಫ್ ಎಂದು ಗುರುತಿಸಲಾಗಿದೆ.ಫೆ.16 ರಂದು ಬೆಳ್ಳಾರೆ ಠಾಣಾ ಪೊಲೀಸರು ಹಾಸನ ಜಿಲ್ಲೆ ಅರಕಲಗೂಡು ತಾಲೂಕು, ಮಾಚಗೇನಹಳ್ಳಿ ಎಂಬಲ್ಲಿ ಸಾಧಿಕ್ ಶರೀಫ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರಾಜ್ಯ