ಕಾರವಾರ : ಮಂಗಳೂರು ಮೂಲದ ಪ್ರಯಾಣಿಕರ ಮೇಲೆ ಟೋಲ್ ಸಿಬಂದಿಯಿಂದ ಹಲ್ಲೆ,ದೂರು ದಾಖಲು..!

ಕಾರವಾರ : ಮಂಗಳೂರು ಮೂಲದ ಪ್ರಯಾಣಿಕರ ಮೇಲೆ ಟೋಲ್ ಸಿಬಂದಿಯಿಂದ ಹಲ್ಲೆ,ದೂರು ದಾಖಲು..!

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹೊಳೆಗದ್ದೆ ಟೋಲ್ ಪ್ಲಾಝಾದಲ್ಲಿ ಕಾರು ಪ್ರಯಾಣಿಕರ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಘಟನೆಯಲ್ಲಿ ಮಂಗಳೂರು ಮೂಲದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.ಹಲ್ಲೆಯಿಂದ ಮಹಿಳೆ ಸೇರಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳೂರಿನ ಮುಜೀಝ್ ಎಂಬವರ ಕುಟುಂಬ ಕುಮಟಾ ಮಾರ್ಗವಾಗಿ ಗದಗದ ಲಕ್ಷ್ಮೀಶ್ವರಕ್ಕೆ ಹೋಗುತಿದ್ದರು.ಈ ವೇಳೆ ಕುಮಟಾ ಹೊಳೆಗದ್ದೆ ಟೋಲ್ ಗೇಟ್ನಲ್ಲಿ ಫಾಸ್ಟ್ ಟ್ಯಾಗ್ನಿಂದ ಹಣ ಕಡಿತವಾಗದೇ ಸಮಸ್ಯೆಯಾದಾಗ, ಟೋಲ್ ಸಿಬ್ಬಂದಿ ಕಿರಣ್, ಸತೀಶ್ ಹಾಗೂ ಮಂಜುನಾಥ್ ಎಂಬುವವರಿಂದ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದು ಸಿಬ್ಬಂದಿ ಮಜೀಝ್ ರ ಕಾರಿನ ಗಾಜು ಪುಡಿ ಮಾಡಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಮಹಿಳೆಯರು, ಮಜೀಝ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ರಾಜ್ಯ