ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಪುತ್ತೂರು : ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಲಗಿದಲ್ಲೇ ಮೃತಪಟ್ಟಿರುವ ಘಟನೆ ಉಪ್ಪಿನಂಗಡಿಯ ಸಮೀಪ ನಡೆದಿದೆ.

ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಿವಾಸಿ ಉದ್ಯಮಿ ದಾವೂದ್ ಅವರ ಪುತ್ರಿ ಹಫೀಝಾ (17) ಮೃತ ವಿದ್ಯಾರ್ಥಿನಿಯಾಗಿದ್ದಾಳೆ.

ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಹಫೀಝಾ ಕಲಿಯುತ್ತಿದ್ದರು. ಬುಧವಾರ ತಡರಾತ್ರಿ ವರೆಗೆ ಅಭ್ಯಾಸದಲ್ಲಿ ತೊಡಗಿಸಿ ಕೊಂಡಿದ್ದ ಆಕೆ ಬಳಿಕ ಮಲಗಲು ಹೋಗಿದ್ದಾಳೆ . ಗುರುವಾರ ಬೆಳಗ್ಗೆ ಎದ್ದೇಳದೇ ಇರುವುದನ್ನು ಕಂಡು ಮನೆಯವರು ಎಬ್ಬಿಸಲು ಹೋದಾಗ ಹಫೀಝಾ ಇಹಲೋಕ ತ್ಯಜಿಸಿದ್ದಾರೆ..

ರಾಜ್ಯ