ಸೌದಿಗೆ ತೆರಳಲು ರೆಡಿಯಾಗಿದ್ದ ಜಾಫರ್ – ರೈಲು ಡಿಕ್ಕಿ ಹೊಡೆದು ಸಾವು

ಸೌದಿಗೆ ತೆರಳಲು ರೆಡಿಯಾಗಿದ್ದ ಜಾಫರ್ – ರೈಲು ಡಿಕ್ಕಿ ಹೊಡೆದು ಸಾವು

ಫೆ.14 ರಂದು ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ಶನಿವಾರ ತಡರಾತ್ರಿ ವೇಳೆ ಸೌದಿಗೆ ತೆರಳಲು ಸಿದ್ಧತೆ ನಡೆಸಿದ್ದ ಯುವಕನೋರ್ವ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಮೃತ ಯುವಕನನ್ನು ಉಚ್ಚಿಲ ರೈಲ್ವೇ ಗೇಟ್ ಸಮೀಪದ ಹಸೈನಾರ್ ಎಂಬವರ ಪುತ್ರ ಜಾಫರ್ (22) ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ವೇಳೆ ಮನೆಗೆ ಮರಳಲು ರೈಲ್ವೇ ಹಳಿಯನ್ನು ದಾಟುವ ಸಂದರ್ಭ ಅವರಿಗೆ ರೈಲು ಢಿಕ್ಕಿ ಹೊಡೆದಿತ್ತು. ಅವರು ಸ್ಥಳದಲ್ಲೆ ಕೊನೆಯುಸಿರೆಳೆದಿದ್ದರು.ಇತ್ತೀಚೆಗಷ್ಟೇ ಮುಂಬೈನಿಂದ ಕೆಲಸ ತ್ಯಜಿಸಿ ಊರಿಗೆ ಮರಳಿದ್ದ ಜಾಫರ್, ಸೌದಿ ವೀಸಾ ಬಂದಿದ್ದರಿಂದ ಫೆಬ್ರವರಿ 14 ರಂದು ಅಲ್ಲಿಗೆ ಉದ್ಯೋಗದ ನಿಮಿತ್ತ ತೆರಳಲು ಸಿದ್ಧತೆ ನಡೆಸಿದ್ದರು. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ