ಕಡಬ: ಜಮೀನಿಗೆ ಅಕ್ರಮ ಪ್ರವೇಶ; ಮಹಿಳೆಯ ಮೇಲೆ ಹಲ್ಲೆ..!

ಕಡಬ: ಜಮೀನಿಗೆ ಅಕ್ರಮ ಪ್ರವೇಶ; ಮಹಿಳೆಯ ಮೇಲೆ ಹಲ್ಲೆ..!

ಕಡಬ ತಾಲೂಕು ಬಿಳಿನೆಲೆ ಗ್ರಾಮದ ಚಂಡೆಹಿತ್ಲು ಎಂಬಲ್ಲಿ ಮಹಿಳೆಯೋರ್ವರು ತನ್ನ ಜಮೀನಿನಲ್ಲಿರುವಾಗ ಪಕ್ಕದ ಜಮೀನಿನ ಮಾಲಿಕ ಅಕ್ರಮವಾಗಿ ಪ್ರವೇಶಿಸಿ ಅವ್ಯಾಚವಾಗಿ ಬಯ್ದು, ಹಲ್ಲೆ ನಡೆಸಿ, ಬಳಿಕ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.ಆರೋಪಿಯನ್ನು ಸಂತೋಷ ಎಂದು ಗುರುತಿಸಲಾಗಿದೆ.

ಕಡಬ ತಾಲೂಕು ಬಿಳಿನೆಲೆ ಗ್ರಾಮದ ಚಂಡೆಹಿತ್ಲು ನಿವಾಸಿ ಸ್ವಪ್ನಾ (48) ಎಂಬವರು ತನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು, ಇವರು ಬೆಳಗ್ಗೆ ತಮ್ಮ ಜಮೀನಿನಲ್ಲಿರುವಾಗ ಪಕ್ಕದ ಜಮೀನಿನ ಮಾಲಿಕನಾದ ಆರೋಪಿ ಜಮೀನಿನಲ್ಲಿ ಕಳೆ ತೆಗೆಯುವ ವಿಚಾರದಲ್ಲಿ ಉಂಟಾದ ತಕರಾರು ಉಂಟಾಗಿರುತ್ತದೆ. ಘಟನೆ ಮುಂದುವರಿದಂತೆ ಬಳಿಕ ಸ್ವಪ್ನಾ ಅವರು ಮನೆಯಲ್ಲಿದ್ದಾಗ, ಆರೋಪಿತನು ಅಕ್ರಮವಾಗಿ ಪ್ರವೇಶಿಸಿ ಅವ್ಯಾಚವಾಗಿ ಬಯ್ದು, ಹಲ್ಲೆ ನಡೆಸಿ, ಬಳಿಕ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ:22-2024. ಕಲಂ:447,323.504.506 ಐ.ಪಿ.ಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ರಾಜ್ಯ