ಮಂಗಳೂರು : ದೂರು ನೀಡಲು ಬಂದ ಮಹಿಳೆಗೆ ಕಿರುಕುಳ ನೀಡಿದ ಪೊಲೀಸ್‌ ಸಸ್ಪೆಂಡ್..!

ಮಂಗಳೂರು : ದೂರು ನೀಡಲು ಬಂದ ಮಹಿಳೆಗೆ ಕಿರುಕುಳ ನೀಡಿದ ಪೊಲೀಸ್‌ ಸಸ್ಪೆಂಡ್..!

ಮಂಗಳೂರು : ಪ್ರಕರಣವೊಂದರ ಬಗ್ಗೆ ದೂರು ನೀಡಲು ಬಂದ ಮಹಿಳೆ ಮೊಬೈಲ್ ಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ಸಂತೋಷ್‌ನನ್ನು ಅಮಾನತುಗೊಳಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ. ಠಾಣೆಗೆ ದೂರು ನೀಡಲು ತೆರಳಿದ್ದ ವೇಳೆ ಮಹಿಳೆ ನಂಬರ್‌ ಪಡೆದ ಸಂತೋಷ್‌ ಆಕೆಗೆ ಆಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದ ಜೊತೆಗೆ ದೂರು ನೀಡಿದರೆ ಜೀವನ ಪರ್ಯಂತ ಕೊರಗುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ನೊಂದ ಮಹಿಳೆ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಅವರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸಂತೋಷ್ ಅವರನ್ನು ಅಮಾನತು ಗೊಳಿಸಿ ತನಿಖೆ ನಡೆಸಲು ಕಮಿಷನರ್ ಆದೇಶಿಸಿದ್ದಾರೆ.

ರಾಜ್ಯ