ಮಾಣಿ: ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

ಮಾಣಿ: ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

ಮಾಣಿ: ಉಪ್ಪಿನಂಗಡಿಯಲ್ಲಿ ಮಗುವನ್ನೆತ್ತಿಕೊಂಡು ಬಂದ ಮಹಿಳೆಯೋರ್ವರಿಗೆ ತನ್ನ ಸೀಟು ಬಿಟ್ಟು ಕೊಟ್ಟು ನಿಂತಿದ್ದ ವೇಳೆ ಬಸ್ಸಿನಿಂದ ಹೊರಗೆಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಡೆದಿದೆ.

ನಿನ್ನಿಕಲ್ಲ್ ನಿವಾಸಿ ಶ್ರೀಮತಿ ರಾಧಾ (66) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.

ಜ.31ರಂದು ಕಾರ್ಯನಿಮಿತ್ತ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಗುವನ್ನೆತ್ತಿಕೊಂಡು ಬಂದ ಮಹಿಳೆಯೋರ್ವರಿಗೆ ತನ್ನ ಸೀಟು ಬಿಟ್ಟು ಕೊಟ್ಟು ನಿಂತಿದ್ದ ವೇಳೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡಿದ್ದರು.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದಾರೂ, ತನ್ನ ದೇಹಾರೋಗ್ಯದಲ್ಲಿ ಯಾವುದೇ ಬೆಳವಣಿಗೆ ಕಾಣಿಸದ ಕಾರಣ ಬುಧವಾರ ಮನೆಗೆ ಕರೆತರಲಾಗಿತ್ತು.ಮನೆ ತಲುಪುತ್ತಿದ್ದಂತೆಯೇ ಅವರು ಸಾವನ್ನಪ್ಪಿದ್ದಾರೆ. ಇವರ ಪತಿ ಕೆಲ ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಶ್ರೀ ಮಾಧವ ಶಿಶು ಮಂದಿರದ ಮಾತೃ ಮಂಡಳಿ, ವನಿತಾ ಭಜನಾ ಮಂಡಳಿ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

ರಾಜ್ಯ