
ಮೊಬೈಲ್ ಅಂಗಡಿಯೊಂದರ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ಕಡಬ/ ಆಲಂಕಾರಿನಲ್ಲಿ ನಡೆದಿದ್ದು ಕಡಬ ಪೊಲೀಸರು ಓರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಫೆ.5 ರಂದು ರಾತ್ರಿ ಅಂದಾಜು 1:30 ಗಂಟೆಯ ಹೊತ್ತಿಗೆ ಆಲಂಕಾರು ಶ್ರೀ ದುರ್ಗಾಟವರ್ಸ್ ನಲ್ಲಿ ಕಾರ್ಯಚರಿಸುತ್ತಿದ್ದ ಸಾನಿಧ್ಯ ಮೊಬೈಲ್ ಅಂಗಡಿಯೊಂದಕ್ಕೆ ಅಂಗಡಿಯ ಎರಡು ಬೀಗಗಳನ್ನು ಏಕ್ಸೋ ಬ್ಲೇಡ್ ಮೂಲಕ ಕತ್ತರಿಸಿ ಮೊಬೈಲ್ ಹಾಗೂ ಹಣ ಕಳ್ಳತನ ಮಾಡಲಾಗಿತ್ತು.
ಘಟನೆಯ ದೃಶ್ಯಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು ಕಡಬ ಪೋಲಿಸರು ಪರೀಶಿಲನೆ ನಡೆಸಿದಾಗ ಆತ ಹೊರ ರಾಜ್ಯದಿಂದ ಬಂದಿದ್ದು ನೆಕ್ಕರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಹತ್ತಿರ ಇಟ್ಟಿಗೆ ಫ್ಯಾಕ್ಟರಿ ಯಲ್ಲಿ ಒಂದು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಾನೆ ಎಂದು ತಿಳಿದು ಬಂದಿದೆ. ಪೋಲಿಸ್ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರ ಬೀಳುವ ಸಾದ್ಯತೆ ಇದೆ.