
ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ರಾಜಣ್ಣ ಇವರನ್ನು ಲೋಕಸಭಾ ಚುನಾವಣಾ ಕರ್ತವ್ಯ ಹಿನ್ನಲೆಯಲ್ಲಿ ವರ್ಗಾವಣೆ ಗೊಳಿಸಿ ಆದೇಶ ಮಾಡಲಾಗಿದೆ. ನೂತನ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಶಿಕಾರಿಪುರದ ಅಧಿಕಾರಿ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದು ಕೇವಲ ಚುನಾವಣೆಯ ಹಿನ್ನಲೆಯಲ್ಲಿ ಮಾತ್ರ ಮಾಡಲಾಗಿದೆ ಮತ್ತು ಚುನಾವಣೆ ಮುಗಿದ ಬಳಿಕ ಮೊದಲಿನಂತೆ ಸುಳ್ಯಕ್ಕೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
