ಕಡಬ: ಕೋಡಿಂಬಾಳದ ಪುಳಿಕುಕ್ಕು ಕಾಡಲ್ಲಿ ಉಳಿದುಕೊಂಡ ಒಂಟಿ ಸಲಗ

ಕಡಬ: ಕೋಡಿಂಬಾಳದ ಪುಳಿಕುಕ್ಕು ಕಾಡಲ್ಲಿ ಉಳಿದುಕೊಂಡ ಒಂಟಿ ಸಲಗ

ಕಡಬ : ಫೆ.4 ರ ಮಧ್ಯೆ ರಾತ್ರಿ ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಅರಣ್ಯದಲ್ಲಿ ಪಂಬೆತ್ತಾಡಿ ಕಡೆಯಿಂದ ಬಂದ ಕಾಡಾನೆ ಪುಳಿಕುಕ್ಕು ಕಾಡಿನಲ್ಲಿ ಉಳಿದುಕೊಂಡು ಗ್ರಾಮದ ಜನರ ನಿದ್ದೆಗೆಡಿಸಿದೆ.

ಈ ಕಾಡಾನೆ ಬಂಟಮಲೆ ಅರಣ್ಯ ಪ್ರದೇಶದಿಂದ ನಿನ್ನೆ ರಾತ್ರಿ ಪಂಬೆತ್ತಾಡಿ ಮೂಲಕ ಕರಿಕ್ಕಳದಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯನ್ನು ದಾಟಿದೆ. ಬಳಿಕ ಪಂಜದ ಗಾಳಿಬೀಡು ಮೂಲಕ ಚಿಂಗಾಣಿಗುಡ್ಡೆ, ಬೊಳ್ಳಾಜೆ , ನೆಕ್ಕಿಲ ಸಮೀಪದಲ್ಲಿ ಕೃಷಿ ತೋಟಗಳ ಮೂಲಕ ಸಂಚರಿಸಿ ಪುಳಿಕುಕ್ಕು ಅರಣ್ಯದಲ್ಲಿ ಉಳಿದಿದೆ.

ಯಾವುದೇ ಸಮಯದಲ್ಲಿ ಜನವಸತಿ ಇರುವ ಪ್ರದೇಶದ ಮೂಲಕ ಕೋಡಿಂಬಾಳ ಗ್ರಾಮವನ್ನು ದಾಟಿ ಕಡಬ ಮೂಲಕ ಇಚಿಲಂಪಾಡಿ ಕಾಡನ್ನು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ .ಈ ಪ್ರದೇಶದಲ್ಲಿ ಸಂಚರಿಸುವವರು ಜಾಗೃತಿ ವಹಿಸ ಬೇಕಾಗಿದೆ.

ರಾಜ್ಯ