
ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟ್ ವಳಲಂಬೆ ಅಧ್ಯಕ್ಷತೆ ಆಯ್ಕೆಯಾದ ನಂತರ ಫಸ್ಟ್ ರಿಯಾಕ್ಷನ್ ಹಂಚಿಕೊಂಡಿದ್ದಾರೆ.ನ್ಯೂಸ್ ರೂಮ್ ಫಸ್ಟ್ ಜೊತೆ ಮಾತನಾಡಿದ ಅವರು,

ಪಕ್ಷದ ಹಿರಿಯರು ಮತ್ತು ಸಂಘಟನೆ ಹಿರಿಯರು ಸುಳ್ಯದಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಬೆಳೆಸಲು ಅವಕಾಶ ನೀಡಿದ್ದಾರೆ, ಅವರಿಗೆ ಅಭಾರಿಯಾಗಿದ್ದೇನೆ, ಪಕ್ಷದಲ್ಲಿ ಈಗಾಗಲೇ ಹಗಲಿರುಳು ದುಡಿದ ಹಿರಿಯರಿದ್ದಾರೆ, ಪಕ್ಷ ಮತ್ತು ರಾಷ್ಟ್ರೀಯತೆಯನ್ನು ಅದೆಷ್ಟೋ ಯುವಕರು ಪಕ್ಷ ಬೆಳವಣಿಗೆಗೆ ಕಾರಣೀ ಕರ್ತರಾಗಿದ್ದಾರೆ, ಹಿರಿಯರು, ಮತ್ತು ಯುವಕರುಗಳನ್ನು ಒಂದು ಸೇರಿಸಿ ಯಾವುದೇ ಜಾತಿ ಮತ ಬೇದವಿಲ್ಲದೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಧ್ರ ಪಡಿಸಿ ಎಲ್ಲರೂ ಒಂದಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಪಣ ತೊಡುವುದರೊಂದಿಗೆ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಯವರನ್ನು ಮತ್ತೊಮ್ಮೆ ಭವ್ಯ ಭಾರತದ ಪ್ರಧಾನಿಯಾಗಿಸಿ ಭದ್ರ ಭಾರತದ ನಿರ್ಮಾಣವೇ ನಮ್ಮ ಮುಂದಿರುವ ಗುರಿ ಎಂದು ನ್ಯೂಸ್ ರೂಮ್ ಫಸ್ಟ್ ಜೊತೆ ವೆಂಕಟ್ ವಳಲಂಬೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.