ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಗುತ್ಯಮ್ಮ ದೇವಿಯ ಸಾನಿಧ್ಯದಲ್ಲಿ ವಾರ್ಷಿಕ ಮಹೋತ್ಸವ :

ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಗುತ್ಯಮ್ಮ ದೇವಿಯ ಸಾನಿಧ್ಯದಲ್ಲಿ ವಾರ್ಷಿಕ ಮಹೋತ್ಸವ :

ಸುಳ್ಯ : ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಜ.31ರಂದು ಭಾರೀ ಭಕ್ತಿ ಸಡಗರದಿಂದ ನಡೆಯಿತು. ಉತ್ಸವದ ಅಂಗವಾಗಿ ಜ.31 ರಂದು ಕ್ಷೇತ್ರದ ಗರ್ಭಗುಡಿ ತೆರೆದು ವಿಶೇಷ ಪೂಜೆ ನೆರವೇರಿಸಲಾಯಿತು.

ಇಲ್ಲಿ ಡಾ.ರೇಣುಕಾಪ್ರಸಾದ್ ಕೆ.ವಿ. ಧರ್ಮದರ್ಶಿಗಳಾಗಿದ್ದು ಅವರೇ ನಿರ್ಮಿಸಿದ ಸುಂದರ ಸಂಪೂರ್ಣ ಶಿಲಾ ದೇವಸ್ಥಾನ ಇದಾಗಿದ್ದು ಇಲ್ಲಿ ವರ್ಷಕ್ಕೊಮ್ಮೆ ಬಾಗಿಲು ತೆರೆಯಲ್ಪಡುವ, ಅಂದರೆ ಪ್ರತೀ ಜನವರಿ ತಿಂಗಳ 31 ನೇ ತಾರೀಕಿನಂದು ಶ್ರೀ ಗುತ್ಯಮ್ಮ ದೇವಿ ಭಕ್ತರಿಗೆ ದರ್ಶನ ನೀಡುತ್ತಾರೆ.
ದೇಗುಲದಲ್ಲಿ ನಿನ್ನೆ ಮುಂಜಾನೆಯಿಂದಲೇ ಸ್ವಸ್ತಿ , ಪುಣ್ಯಾಹವಾಚನೆ, ನಿರ್ಮಾಲ್ಯ ವಿಸರ್ಜನೆ, ಜಾತ ವೇದಸೆ ಮಂತ್ರ ಹೋಮ ಸಪ್ತಸತಿ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು. ಮಧ್ಯಾಹ್ನ ದೈವ ದೇವರ ಆರಾಧನೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಉತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಗುತ್ಯಮ್ಮ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಧರ್ಮದರ್ಶಿ ಡಾ.ರೇಣುಕಾ ಪ್ರಸಾದ್ ಕೆ.ವಿ ಅವರು ಆಗಮಿಸಿದ ಪ್ರತಿಯೊಬ್ಬರನ್ನೂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಾ.ಜ್ಯೋತಿ ಆರ್ ಪ್ರಸಾದ್, ಡಾ.ಅಭಿಜ್ಞಾ ಆರ್.ಪ್ರಸಾದ್, ಮೌರ್ಯ ಆರ್.ಪ್ರಸಾದ್, ಎಒಎಲ್ಇ ಬಿ ಕಮಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ಕಮಲಾಕ್ಷ ನಂಗಾರು ಅರುಣ್ ಕುರುಂಜಿ , ಯಶೋಧಾ ರಾಮಚಂದ್ರ ಸಹಕಾರ ನೀಡುತ್ತಿದ್ದರು.

ಶಾಸಕಿ ಭಾಗೀರಥಿ ಮುರುಳ್ಯ, ಕುವೆಂಪು ವಿವಿ ನಿವೃತ್ತ ಉಪಕುಲಪತಿ ಡಾ.ಚಿದಾನಂದ ಕೊಳಂಬೆ ಸೇರಿದಂತೆ ಸಾವಿರಾರು ಭಕ್ತಾಭಿಮಾನಿಗಳು ದೇವಿಯ ದರ್ಶನ ಪಡೆದರು.

ರಾಜ್ಯ