ನಿಮ್ಮಿಷ್ಟದ ರವಿಕೆಯೊಂದಿಗೆ ಒಂದು ಫೋಟೋ ಕಳಸಿ, ಬಹುಮಾನ ಗೆಲ್ಲಿ…ಈ ಸ್ಪರ್ಧೆ ಹೆಣ್ಣು ಮಕ್ಕಳಿಗೆ ಮಾತ್ರ.!

ನಿಮ್ಮಿಷ್ಟದ ರವಿಕೆಯೊಂದಿಗೆ ಒಂದು ಫೋಟೋ ಕಳಸಿ, ಬಹುಮಾನ ಗೆಲ್ಲಿ…ಈ ಸ್ಪರ್ಧೆ ಹೆಣ್ಣು ಮಕ್ಕಳಿಗೆ ಮಾತ್ರ.!

ಹೌದು ಹೀಗೊಂದು ಸ್ಪರ್ಧೆ ನಡೆಸುತ್ತಿದೆ ರವಿಕೆ ಪ್ರಸಂಗ ಚಿತ್ರ ತಂಡ.ಸುಳ್ಯದ ಸಂತೋಷ್ ಕೊಡಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಚಿತ್ರ ಬಿಡುಗಡೆಗೆ ಸಿದ್ದ ಗೊಂಡಿದ್ದು ಫೆ 16 ರಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.ಚಿತ್ರ ತಂಡ ಹೀಗಾಗಲೇ ಪ್ರಚಾರದಲ್ಲಿ ತೊಡಗಿದ್ದು ಹೀಗೊಂದು ಸ್ಪರ್ಧೆ ನಡೆಸುತ್ತಿದೆ. ಮಹಿಳೆಯರು ತಮಗೆ ಇಷ್ಟವಾದ ರವಿಕೆಯ ಜೊತೆ ಫೋಟೋ ತೆಗೆದು +91 6366950230 ಸಂಖ್ಯೆಗೆ ಕಳುಹಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ವಿಜೇತರಿಗೆ ಕುಟುಂಬ ಸಮೇತ ರವಿಕೆ ಪ್ರಸಂಗ ಚಿತ್ರವನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ಮತ್ತು ಸ್ಪೆಷಲ್ ಶೋ ನಲ್ಲಿ ಸ್ಟಾರ್ ಗಳ ಜೊತೆ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.ಹಾಗೂ ಮೊಬೈಲ್ ಸಹಿತ ಇನ್ನೂ ಹಲವು ಬಹುಮಾನಗಳನ್ನು ವಿತರಿಸಲಾಗುವುದು ಎಂದು ರವಿಕೆ ಪ್ರಸಂಗ ಚಿತ್ರದ ಕಥೆ ಮತ್ತು ಸಂಭಾಷಣೆ ಬರೆದ ಪವನ ಸಂತೋಷ್ ಅವರು ನ್ಯೂಸ್ ರೂಮ್ ಪಸ್ಟ್ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಮನೋರಂಜನೆ ರಾಜ್ಯ