
ಫೆ .3 ರಂದು ಪೆರಾಜೆಯ ಅಮಚೂರು ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಸ್ಥಾನದಲ್ಲಿ 10ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ಸಕಲ ಸಿದ್ದತೆಗಳು ನಡೆಯುತ್ತಿವೆ,ಫೆ 03 ರ ಶನಿವಾರ ಬೆಳಗ್ಗೆ ಗಂಟೆ 6-00ಕ್ಕೆ ದೀಪ ಪ್ರತಿಷ್ಠೆ ನಂತರ ಶ್ರೀ ಗುರುಗಳ ಪಾದಪೂಜೆ ನಡೆಯಲಿದೆ
ಬೆಳಗ್ಗೆ ಗಂ. 6-20ಕ್ಕೆ: ಶ್ರೀ ಗಣಪತಿ ಹವನ,ಶುದ್ಧಿ ಕಲಶ, ಉದಯ ಪೂಜೆ ನಡೆದು ಪೂರ್ವಾಹ್ನ 11-30ಕ್ಕೆ: ಶ್ರೀ ನಾಗಬ್ರಹ್ಮ ದೇವರಿಗೆ ಪೂಜೆ ಹಾಗೂ ನಾಗ ತಂಬಿಲ
ಮಧ್ಯಾಹ್ನ 12-30ಕ್ಕೆ: ಮಹಾಪೂಜೆ, ದರ್ಶನಬಲಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ. ನಡೆಯಲಿದೆ
ಸಂಜೆ 6-00ರಿಂದ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ, ಪುತ್ಯ-ಪೆರಾಜೆ ,ಶ್ರೀ ಬಸವೇಶ್ವರ ಭಜನಾ ಸಂಘ ಕಾಂತಬೈಲು, ಶ್ರೀ ಬಸವೇಶ್ವರ ಭಜನಾ ಮಂಡಳಿ, ಕಾಂತುಬೈಲು-ದಬ್ಬಡ್ಕ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8-15ಕ್ಕೆ: ಮಹಾಪೂಜೆ, ದರ್ಶನಬಲಿ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ರಾತ್ರಿ 12-00ರಿಂದ: ಶ್ರೀ ಅಮ್ಮನವರ ದೊಂಬಿಸೇವೆ, ಶಕ್ತಿಪೂಜೆ ಪ್ರಸಾದ ವಿತರಣೆ, ಮಂಗಳಾ ಸೇವೆ ನಡೆಯಲಿದೆ.


ಕಾರ್ಯಕ್ರಮಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ,ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಸುಂದರ ಪ್ರಕೃತಿಯ ರಮಣೀಯ ತಾಣ ಪೆರಾಜೆಯ ಈ ಬೆಟ್ಟದಪುರ ಕ್ಷೇತ್ರ…
ಸುಳ್ಯಕ್ಕೆ ಅನತಿ ದೂರದಲ್ಲಿರುವ ಮಡಿಕೇರಿ ತಾಲೂಕಿಗೆ ಒಳಪಡುವ ಪೆರಾಜೆ ಗ್ರಾಮದ ಅಮಚೂರಿನ ಬೆಟ್ಟದ ಪುರ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಿ ದೇವಸ್ಥಾನದಲ್ಲಿ ದೇವಿ ದರ್ಶನಕ್ಕೆ ಭಕ್ತಾದಿಗಳು ಸುಮಾರು 71 ಮೆಟ್ಟಿಲುಗಳನ್ನು ಹತ್ತಿ ಬರಲೇ ಬೇಕಾದ ಪುಣ್ಯಕ್ಷೇತ್ರ, ಅತೀ ಎತ್ತರವಾದ ಬೆಟ್ಟದ ತುದಿಯಲ್ಲಿ ವಿರಾಜಮಾನವಾಗಿರುವ ದೇವಿಯ ದರುಶನಕ್ಕೆ ಪ್ರತಿದಿನ ನೂರಾರು ಭಕ್ತಾದಿಗಳು ಬರುತ್ತಿದ್ದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಸಂತೃಪ್ತಿಯಲ್ಲಿ ದೇವಿಗೆ ಭಕ್ತಿಯಿಂದ ನಮಿಸಿ ತೆರಳುವ ದೃಶ್ಯ ಸದಾ ಕಂಡುಬರುತ್ತದೆ.ಇದೊಂದು ಭಕ್ತಿತಾಣ ಮಾತ್ರವಲ್ಲ ಸುಂದರ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದಾದ ಪ್ರವಾಸಿರ ಸ್ವರ್ಗ ಎನಿಸಬಹುದಾದ ಸ್ಥಳ ಇದಾಗಿದೆ.