
ಕೊಲ್ಲಮೊಗ್ರು ಗ್ರಾಮದ ಮಿತ್ತೋಡಿಯಲ್ಲಿ ಕಿರು ಸೇತುವೆಯ ಇಕ್ಕೆಲಗಳಲ್ಲಿ ಮಾಡಬೇಕಿದ್ದ ತಡೆಗೋಡೆ ಕಾಮಗಾರಿ ಅರ್ಧದಲ್ಲಿ ನಿಂತಿರುವ ಕಾಮಗಾರಿಯನ್ನು ಜ.29 ರಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ವೀಕ್ಷಣೆ ಮಾಡಿದರು.


ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಪೋನ್ ಮುಖಾಂತರ ಮಾತನಾಡಿ ಕಾಮಗಾರಿ ಪೂರ್ಣ ಗೊಳಿಸುವ ಭರವಸೆ ನೀಡಿದ್ದಾರೆ. ಈ ಸಂದರ್ಭ ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಚಾಂತಾಳ, ಉಪಾಧ್ಯಕ್ಷ ಅಶ್ವಥ್ ಯಲದಾಳು, ಸದಸ್ಯರಾದ ಪುಷ್ಪರಾಜ್ ಪಡ್ಪು, ಮಾದವ ಚಾಂತಾಳ, ಸ್ಥಳೀಯರಾದ ಉದಯ ಶಿವಾಲ ಮತ್ತಿತರರು ಉಪಸ್ಥಿತರಿದ್ದರು.