
ಕಾರ್ಕಳ ನಂದಳಿಕೆ ಶ್ರೀ ಮಹಾಮ್ಮಯಿ ದೇವಸ್ಥಾನದಲ್ಲಿ ಜರುಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಪ್ರಸಾದ ರೂಪದಲ್ಲಿ ಭೋಜನ ಸೇವಿಸಿ ಹಾಳೆಯ ಪ್ಲೇಟ್ ಎಸೆಯಲು ಹೋದಾಗ ಟ್ಯಾಂಕ್ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟ ಮಹಿಳೆ ಬೆಳ್ಮಣ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಲತಾ (50) ಎಂದು ಗುರುತಿಸಲಾಗಿದೆ.


ಮಂಗಳವಾರದಂದು ನಂದಳಿಕೆಯ ಶ್ರೀ ಮಹಾಮ್ಮಯಿ ದೇವಸ್ಥಾನದಲ್ಲಿ ಜರುಗಿದ್ಧ ವಾರ್ಷಿಕ ಮಾರಿಪೂಜ ಕಾರ್ಯಕ್ರಮದಲ್ಲಿ ಶ್ರೀಲತಾ ಪಾಲ್ಗೊಂಡಿದ್ದರು. ಈ ಘಟನೆಯಲ್ಲಿ ಶ್ರೀಲತಾ ಮೃತಪಟ್ಟಿದ್ದು, ಅವರ ಮಗಳು ಪೂಜಾ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.