ಕುಶಾಲನಗರ ಗುಡ್ಡೆಹೊಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌-ಸ್ಕೂಟರ್ ಗೆ ಡಿಕ್ಕಿ : ಮಹಿಳೆ ಸಾವು

ಕುಶಾಲನಗರ ಗುಡ್ಡೆಹೊಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌-ಸ್ಕೂಟರ್ ಗೆ ಡಿಕ್ಕಿ : ಮಹಿಳೆ ಸಾವು

ಮಡಿಕೇರಿ : ಕೆಎಸ್‌ಆರ್‌ಟಿಸಿ ಬಸ್ ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಡ್ಡೆಹೊಸೂರಿನಲ್ಲಿ ನಡೆದಿದೆ.ಸಿದ್ದಾಪುರದ ಲಲಿತಾ (53) ಎಂಬವರು ಮೃತ ದುರ್ದೈವಿ.

ಅತ್ತೂರು ಕಡೆಯಿಂದ ಗುಡ್ಡೆಹೊಸೂರಿಗೆ ಬರುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡಿ ಸಿಲುಕಿದ ಪರಿಣಾಮ ಲಲಿತಾ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಕೂಟಿ ಚಲಾಯಿಸುತ್ತಿದ್ದ ಲಲಿತಾ ಅವರ ಸಹೋದರಿ ಪುತ್ರಿ ಸಿಂಚನಾ ಗಂಭೀರ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯ