ಪೆರಾಜೆ ಗ್ರಾಮದಲ್ಲಿ ಒಂಟಿ ಸಲಗದ ಸಂಚಾರ: ಬಿಳಿಯಾರಿನಲ್ಲಿ ರಸ್ತೆ ಬದಿ ನಿಂತಿದ್ದ ಓಮ್ನಿ ಕಾರಿನ ಮೇಲೆ ತುಳಿದು ಹಾನಿ : ಚಾಲಕ ಸಣ್ಣ ಗಾಯದೊಂದಿಗೆ ಪಾರು.

ಪೆರಾಜೆ ಗ್ರಾಮದಲ್ಲಿ ಒಂಟಿ ಸಲಗದ ಸಂಚಾರ: ಬಿಳಿಯಾರಿನಲ್ಲಿ ರಸ್ತೆ ಬದಿ ನಿಂತಿದ್ದ ಓಮ್ನಿ ಕಾರಿನ ಮೇಲೆ ತುಳಿದು ಹಾನಿ : ಚಾಲಕ ಸಣ್ಣ ಗಾಯದೊಂದಿಗೆ ಪಾರು.

ಒಂಟಿಸಲಗವೊಂದು ಪೆರಾಜೆ ಗ್ರಾಮದಲ್ಲಿ ಸುತ್ತಾಡಿ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭ ಬಿಳಿಯಾರಿನಲ್ಲಿ ನಿಂತಿದ್ದ ಓಮಿನಿ ಕಾರಿಗೆ ಹಾನಿ ಮಾಡಿ ತೆರಳಿರುವ ಘಟನೆ ಇಂದು ಬೆಳಿಗ್ಗೆ 8.30 ರ ವೇಳೆಗೆ ನಡೆದಿದೆ, ಪೆರಾಜೆಯ ಉಧ್ಯಮಿ ಉನೈಸ್ ಪೆರಾಜೆಯವರ ಕಾರು ಇದಾಗಿದ್ದು, ಕಾರಿನ ಚಾಲಕ ಗೂನಡ್ಕ ಅವಿನಾಶ್ ಅಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆನೆ ದಾಳಿ ಮಾಡುತ್ತಿದ್ದ ವೇಳೆ ಅವರು ಕಾರಿನ ಮುಂಬಾಗದ ಸೀಟಿನಲ್ಲಿ ಕುಳಿತ್ತಿದ್ದರು, ಕೈ ಗೆ ಸ್ವಲ್ಪ ಗಾಯವಾಗಿದ್ದು , ಅಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ 8.30 ಕ್ಕೆ ಶಾಲಾ ವಿದ್ಯಾರ್ಥಿಗಳು ಇದೇ ಬಾಗದಲ್ಲಿ ಬರುವವರಾಗಿದ್ದು ,
ಗ್ರಾಮದಲ್ಲಿ ಆನೆ ಬಂದಿರುವ ಸುದ್ದಿ ಮತ್ತು ವೀಡಿಯೋ ತುಣುಕುಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಎಚ್ಚರಿಕೆ ಸಂದೇಶ ವನ್ನು ಹರಿಯಬಿಡಲಾಗಿತ್ತು, ಇನ್ನು ಆನೆ ಗ್ರಾಮದ ಪೀಚೆ, ಕುಂಡಾಡು, ನಿಡ್ಯಮಲೆ, ಕುಂಬಳಚೇರಿ , ಕೋಡಿ, ಮತ್ತು ಕನ್ನಡ ಪೆರಾಜೆ ಭಾಗದಲ್ಲಿ ಸುತ್ತಾಡಿ ತೆರಳಿದೆ.

ಕಳೆದ ಆರೇಳು ವರ್ಷಗಳಿಂದ ನಿರಂತರವಾಗಿ ಇದೇ ಸಮಯದಲ್ಲಿ ಬರುವ ಆನೆ:

ಇನ್ನು ಇದೇ ಒಂಟಿ ಸಲಗ ಕಳೆದ ಆರೇಳು ವರ್ಷಗಳಿಂದ ನಿರಂತರವಾಗಿ ಇದೇ ಸಮಯದಲ್ಲಿ ಪೆರಾಜೆ ಗ್ರಾಮದಲ್ಲಾಗಿ ಕೋಳಕ್ಕಿ ಮಲೆ ಬೆಟ್ಟಕ್ಕೆ ಹೋಗಿಬರುತ್ತಿದ್ದು, ಒಂದು ವಾರದ ಬಳಿಕ ಮತ್ತೆ ಹಿಂತುರುಗಿ ಹೋಗುತ್ತದೆ, ಈ ವರ್ಷವೂ ಬಂದಿರುವ ಆನೆ ಅದೇ ಎಂದು ಹೇಳಲಾಗಿದೆ, ಪ್ರತೀ ವರ್ಷ ಆಷ್ಟಾಗಿ ಯಾವುದೇ ಹಾನಿ ಮಾಡದ ಆನೆ ಈ ಬಾರೀ ಮಾತ್ರ ಕಾರಿಗೆ ತುಳಿದು ಗಾಜು ಪುಡಿಗೈದು ತೆರಳಿದೆ.

ರಾಜ್ಯ