ಅಪಘಾತದಲ್ಲಿ ಕೈ ಕಳೆದುಕೊಂಡ ಯುವಕನ ಚಿಕಿತ್ಸೆ ನೆರವಾಗಲು ಸಹೃದಯಿಗಳಲ್ಲಿ ಕಳಕಳಿಯ ಮನವಿ

ಅಪಘಾತದಲ್ಲಿ ಕೈ ಕಳೆದುಕೊಂಡ ಯುವಕನ ಚಿಕಿತ್ಸೆ ನೆರವಾಗಲು ಸಹೃದಯಿಗಳಲ್ಲಿ ಕಳಕಳಿಯ ಮನವಿ

ಸುಳ್ಯ ತಾಲೂಕಿನ ಯುವಕ ಶಶಿ ಎನ್ನುವ ಇವರು 23-1-2024 ರಂದು ಕೆಲಸಕ್ಕೆಂದು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೆಳಿಗ್ಗೆ ಬೆಳ್ಳಾರೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಪ್ರಾಣಾಪಯದಿಂದ ಪಾರಾದರೂ ಅಪಘಾತದಲ್ಲಿ ಒಂದು ಕೈ ಸಂಪೂರ್ಣ ಛಿದ್ರವಾದ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ, ಹಾಗೂ ಗಂಟಲು ಮತ್ತು ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಇದೀಗ ಆತನ ಚಿಕಿತ್ಸಾ ವೆಚ್ಚ ಅಂದಾಜು 6 ರಿಂದ 8 ಲಕ್ಷದ ವರೆಗೆ ಆಗಬಹುದೆಂದು ವೈದ್ಯರು ತಿಳಿಸಿದ್ದಾರೆ. ಆದರೆ ತೀರಾ ಬಡ ಕುಟುಂಬದವರಾದ ಇವರಿಗೆ ಅಷ್ಟೊಂದು ದುಡ್ಡು ಹೊಂದಿಸುವುದು ಕಷ್ಟವಾಗಿ ದಿಕ್ಕೇ ತೋಚದಂತಾಗಿದ್ದಾರೆ.

ಆದ್ದರಿಂದ ಕುಟುಂಬವು ಈಗ ದಾನಿಗಳ ಮೊರೆ ಹೋಗಿದ್ದು ಸಹೃದಯಿಗಳು ಯುವಕನ ಕುಟುಂಬಸ್ಥರ ಖಾತೆಗೆ ಹಣ ಹಾಕಿ ಧನ ಸಹಾಯ ಮಾಡುವಂತೆ ವಿನಂತಿಸಲಾಗುತ್ತಿದೆ.

ಕೆನರಾ – ಬ್ಯಾಂಕ್ ಶಾಖೆ ಸುಳ್ಯ ಖಾತೆದಾರರ ಹೆಸರು: ಶಶಿಕಾಂತ್ ಸುಳ್ಯ ಖಾತೆ ಸಂಖ್ಯೆ: 110111442599IFSC Code:CNRB0002483Phonepe, Gpay No: 7026706625 ದಯವಿಟ್ಟು ಸಹಾಯ ಮಾಡಿ.‌ ಮತ್ತು ಈ ಸಂದೇಶವನ್ನು ಅತಿ ಹೆಚ್ಚು ಶೇರ್ ಮಾಡಿ🙏🏼🙏🏼🙏🏼🙏🏼🙏🏼

ರಾಜ್ಯ