ಜಾಲ್ಸುರು : ದ್ವಿಚಕ್ರ ವಾಹನಗಳ  ನಡುವೆ ಅಪಘಾತ- ಸಣ್ಣಪುಟ್ಟ ಗಾಯಗಳೊಂದಿಗೆ ಸವಾರರು ಪಾರು

ಜಾಲ್ಸುರು : ದ್ವಿಚಕ್ರ ವಾಹನಗಳ ನಡುವೆ ಅಪಘಾತ- ಸಣ್ಣಪುಟ್ಟ ಗಾಯಗಳೊಂದಿಗೆ ಸವಾರರು ಪಾರು

ಜ.24 ರಂದು ಬೆಳಗ್ಗೆ ಆಕ್ಟಿವಾ ಹಾಗೂ ಬೈಕ್ ಪರಸ್ಪರ ಗುದ್ದಿ ಅಪಘಾತವಾಗಿ ಎರಡು ವಾಹನಗಳ ಸವಾರರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಜಾಲ್ಸುರು ಗ್ರಾಮದ ಕಾಳಮ್ಮನೆ ಬಳಿ ನಡೆದಿದೆ.

ಈ ಘಟನೆ ಕಾಳಮ್ಮನೆ ಜೆ.ಕೆ ಜಯಂತ ಗೌಡರ ಮನೆಯ ಮುಂಭಾಗ ಸಂಭವಿಸಿದ್ದು, ಜಯಂತ ಗೌಡರ ಹಿರಿಯ ಸಹೋದರ ಜೆ.ಕೆ ರಮೇಶ್ ಗೌಡರು ಸಹೋದರನ ಮನೆಗೆ ತನ್ನ ಆಕ್ಟಿವಾ ತಿರುಗಿಸುವ ಸಂದರ್ಭದಲ್ಲಿ ಸುಳ್ಯ ಕಡೆಯಿಂದ ಉಜಿರೆಗೆ ತೆರಳುತ್ತಿದ್ದ ಸುಳ್ಯ ಮೂಲದ ಬೈಕ್ ಸವಾರನ ಬೈಕ್ ಆಕ್ಟಿವಾಕ್ಕೆ ಡಿಕ್ಕಿಯಾಯಿತು.

ಬೈಕ್ ಸವಾರನ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಸವಾರನನ್ನು ತರಾಟೆಗೆ ತೆಗೆದುಕೊಂಡರು.ಸಣ್ಣಪುಟ್ಟ ಗಾಯಗಳೊಂದಿಗೆ ಗಾಯಗೊಂಡ ದ್ವಿಚಕ್ರ ವಾಹನ ಸವಾರರು ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಿದರು.

ರಾಜ್ಯ