ಸಯ್ಯಿದ್ ಹುಸೈನ್ ಪಾಷ ಸಅದಿ ತಂಙಳ್ ನೇತೃತ್ವದಲ್ಲಿ ಕಲ್ಲುಗುಂಡಿ ವಾರ್ಷಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

ಸಯ್ಯಿದ್ ಹುಸೈನ್ ಪಾಷ ಸಅದಿ ತಂಙಳ್ ನೇತೃತ್ವದಲ್ಲಿ ಕಲ್ಲುಗುಂಡಿ ವಾರ್ಷಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್


ಜನವರಿ 21: ಕರ್ನಾಟಕ ಮುಸ್ಲಿಂ ಜಮಾಅತ್, SჄS, SSF ಕಲ್ಲುಗುಂಡಿ ಯೂನಿಟ್ ವತಿಯಿಂದ ದಿನಾಂಕ 21-01-2024 ಆದಿತ್ಯವಾರದಂದು ನಡೆದ ವಾರ್ಷಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಸಯ್ಯಿದ್ ಹುಸೈನ್ ಪಾಷ ಸಅದಿ ತಂಙಳ್ ರವರು ಮಹ್ಳರತುಲ್ ಬದ್ರಿಯಾ ಗೆ ನೇತೃತ್ವ ನೀಡಿ ಹೃದಯತುಂಬಿದ ಪ್ರಾರ್ಥನೆಯ ಮೂಲಕ ಆತ್ಮೀಯ ಚೈತನ್ಯ ನೀಡಿದರು. ನಂತರದ ಸಭಾ ಕಾರ್ಯಕ್ರಮವನ್ನು ನೌಷಾದ್ ಮದನಿ ಅನ್ಸಾರಿಯಾ ರವರು ಉಧ್ಘಾಟಿಸಿದರು.

ಜಲೀಲ್ ಸಖಾಫಿ ಕೊಂಡಂಗೇರಿ ಯವರು SჄS 30 ನೇ ಸಮ್ಮೇಳನದ ಪ್ರಚಾರದ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ SჄS ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸಿದ್ದೀಖ್ ಕಟ್ಟೆಕಾರ್, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಮೊಗರ್ಪಣೆ, SჄS ಸುಳ್ಯ ಝೋನ್ ಸಾಂತ್ವನ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ, SჄS ಸರ್ಕಲ್ ಪ್ರಧಾನ ಕಾರ್ಯದರ್ಶಿ ಶಮೀರ್ ಮೊಗರ್ಪಣೆ, ಸರ್ಕಲ್ ಇಸಾಬ ಕಾರ್ಯದರ್ಶಿ ಹಾರಿಸ್ ಬೋರುಗುಡ್ಡೆ, ಗಾಂಧಿನಗರ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಜಟ್ಟಿಪಳ್ಳ, SჄS ಕಲ್ಲುಗುಂಡಿ ಯೂನಿಟ್ ಉಸ್ತುವಾರಿ ಸಿದ್ದೀಖ್ ಬಿ.ಎ ಗಾಂಧಿನಗರ, ಎಸ್ಸೆಸ್ಸಫ್ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಬಶೀರ್ ಕಲ್ಲುಮುಟ್ಲು, ಗೂನಡ್ಕ SჄS ಪ್ರಧಾನ ಕಾರ್ಯದರ್ಶಿ ಹಾರಿಸ್, ಕೆಸಿಎಫ್ ಅಬೂದಾಬಿ ನಾಯಕರಾದ ಗಫೂರ್ ಸಂಪಾಜೆ ಹಾಗೂ ಸಂಘಕುಟುಂಬದ ನಾಯಕರಾದ ನೌಷಾದ್ ಕೆರೆಮೂಲೆ, ಜಾಬಿರ್ ಎಂ.ಬಿ, ಜಲೀಲ್ ಕಲ್ಲುಗುಂಡಿ, ಹಸೈನ್ ಚಟ್ಟೆಕಲ್ಲು, ಅಶ್ರಫ್ ಚಡಾವು, ಅಝೀಝ್ ಸಂಪಾಜೆ, ಅಲೀ ಚಟ್ಟೆಕಲ್ಲು, ಆಶಿಕ್ ಕೆ.ಹೆಚ್, ರಂಶಾದ್ ರವರು ಭಾಗವಹಿಸಿದರು. ಎ.ಎಂ.ಫೈಝಲ್ ಝುಹ್‌ರಿ ಕಲ್ಲುಗುಂಡಿ ರವರು ಸ್ವಾಗತಿಸಿ, ಸೈದಲವಿ ಕೊಯನಾಡು ವಂದಿಸಿದರು. ಎಸ್ಸೆಸ್ಸೆಫ್ ಯೂನಿಟ್ ಪ್ರಧಾನ ಕಾರ್ಯದರ್ಶಿ ರುನೈಝ್ ಕೊಯನಾಡು ಕಾರ್ಯಕ್ರಮವನ್ನು ನಿರೂಪಿಸಿದರು.

ರಾಜ್ಯ