
ಸುಳ್ಯ: ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಯ ಹಿನ್ನಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಮತ್ತು ಕಾನೂನು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸುಳ್ಯ ತಾಲೂಕಿನಾದ್ಯಂತ ಜ.22 ರಂದು ನಿಷೇಧಾಜ್ಞೆ ಜಾರಿ ಮಾಡಿ ಸುಳ್ಯ ತಹಶೀಲ್ದಾರ್ ಆದೇಶ ಮಾಡಿದ್ದರು. ಆದರೆ ಆದೇಶವನ್ನು ವೆಬ್ ಸೈಟ್ ಮಾದ್ಯಮಗಳು ಸುದ್ದಿ ಮಾಡುತ್ತಿದ್ದಂತೆ, ಇದೀಗ ಆದೇಶ ಹಿಂಪಡೆದಿರುವುದಾಗಿ ಅಧಿಕಾರಿಗಳು ಮತ್ತೆ ಪ್ರಕಟಣೆ ಹೊರಡಿಸಿದ್ದಾರೆ.

