ಬೆಳ್ತಂಗಡಿ: ಅಕ್ರಮ ದನ ಸಾಗಾಟ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ…!

ಬೆಳ್ತಂಗಡಿ: ಅಕ್ರಮ ದನ ಸಾಗಾಟ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ…!

ಬೆಳ್ತಂಗಡಿ: ಅಕ್ರಮ ದನ ಸಾಗಾಟ ಪ್ರಕರಣದ ಆರೋಪಿ ಜಾಮೀನು ಪಡೆದುಕೊಂಡ ಬಳಿಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಹೈಯರ್ ನಗರ ನಿವಾಸಿ ವಾಜೀದ್ ಪಾಷಾ(54) ವಾಜೀದ್ ಎಂದು ಗುರುತಿಸಲಾಗಿದೆ.

ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೇ ಸುಮಾರು 8 ವರ್ಷದಿಂದ ತಲೆಮರೆಸಿಕೊಂಡು ಬೇರೆ ಕಡೆ ವ್ಯಾಪಾರ ಮಾಡಿಕೊಂಡಿದ್ದ. ಈತನನ್ನು ಹಾಸನ ಹೊಳೆನರಸೀಪುರದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕೋರ್ಟ್ ಈತನಿಗೆ ದಂಡ ವಿಧಿಸಿದೆ.

ರಾಜ್ಯ