ಉತ್ತರಪ್ರದೇಶದ ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಟ್ರಕ್‌ ಗೆ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಟ್ರಕ್

ಉತ್ತರಪ್ರದೇಶದ ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಟ್ರಕ್‌ ಗೆ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಟ್ರಕ್

ಉತ್ತರಪ್ರದೇಶದ ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಟ್ರಕ್‌ ಅಗ್ನಿಗೆ ಆಹುತಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪಟಾಕಿಯನ್ನು ಅಯೋಧ್ಯೆಗೆ ಸಾಗಿಸಲಾಗುತ್ತಿತ್ತು.ಉತ್ತರ ಪ್ರದೇಶದ ಪೂರ್ವ ಕೊಟ್ವಾಲಿಯ ಖರ್ಗಿ ಖೇಡಾ ಗ್ರಾಮದ ಬಳಿ ಘಟನೆ ನಡೆದಿದ್ದು, ಸ್ಥಳೀಯರು ಇದನ್ನು ವೀಡಿಯೋ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶ್ರೀರಾಮ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಆಕಾಶದಲ್ಲಿ ವರ್ಣಚಿತ್ತಾರ ನಿರ್ಮಿಸಿ ಸಂಭ್ರಮಿಸಲು ಟ್ರಕ್‌ವೊಂದರಲ್ಲಿ ಪಟಾಕಿಯನ್ನು ಅಯೋಧ್ಯೆಗೆ ಸಾಗಿಸಲಾಗುತ್ತಿತ್ತು. ದಾರಿ ಮಧ್ಯೆ ಇದ್ದಕ್ಕಿದ್ದಂತೆ ಟ್ರಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ವ್ಯಾಪಿಸಿದ ಬೆಂಕಿ ಪಟಾಕಿಗೆ ತಗುಲಿ ಹೊತ್ತಿಕೊಂಡಿದೆ. ಟ್ರಕ್‌ ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಘಟನೆಯನ್ನು ಸ್ಥಳೀಯರು ವೀಡಿಯೋ ಮಾಡಿದ್ದು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯ