ನೆರಿಯ ಕಾಡಿನಲ್ಲಿ ಚಿರತೆ ದಾಳಿಯಿಂದ ರಕ್ತಸಾವ್ರಗೊಂಡು ಕಡವೆ ಸಾವು:ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ

ನೆರಿಯ ಕಾಡಿನಲ್ಲಿ ಚಿರತೆ ದಾಳಿಯಿಂದ ರಕ್ತಸಾವ್ರಗೊಂಡು ಕಡವೆ ಸಾವು:ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ

ಕಳೆದ ರಾತ್ರಿ ನೆರಿಯ ಕಾಡಿನಲ್ಲಿ ಚಿರತೆ ದಾಳಿಯಿಂದ ಕುತ್ತಿಗೆಯಲ್ಲಿ ತೀವ್ರ ಗಾಯಗೊಂಡು ಕಡವೆ ರಕ್ತಸಾವ್ರದಿಂದ ಸಾವನ್ನಪ್ಪಿದೆ.

ಜ.17 ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಮಲ್ಲ ಪ್ರದೇಶದಲ್ಲಿ ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗೊಂಡ ಕಡವೆಯ ಶವ ಪತ್ತೆಯಾಗಿದೆ.

ರಾತ್ರಿ ನೆರಿಯ ಅರಣ್ಯ ಪ್ರದೇಶದಲ್ಲಿ ಚಿರತೆ ಕಡವೆಯ ಮೇಲೆ ದಾಳಿ ನಡೆಸಿದ ಪರಿಣಾಮ ಕುತ್ತಿಗೆಗೆ ತೀವ್ರ ಗಾಯವಾದ ಕಡವೆ ಜೀವ ಉಳಿಸಲು ತಪ್ಪಿಸಿಕೊಂಡು ಮಲ್ಲ ಪ್ರದೇಶದತ್ತ ಬಂದು ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಾಲಾಗಿದ್ದು.

ನೆರಿಯ ಪಶು ವೈದ್ಯರಿಂದ ಸ್ಥಳದಲ್ಲಿಯೇ ಶವಪರೀಕ್ಷೆ ಮಾಡಿ ಅರಣ್ಯ ಇಲಾಖೆಯವರು ದಫನ ಮಾಡಿದರು.

ರಾಜ್ಯ