ಫಾಸ್ಟ್ಯಾಗ್ ಬಳಕೆದಾರರೇ ಎಚ್ಚರ …! ಕೆವೈಸಿ ಪೂರ್ಣಗೊಳಿಸದ ಖಾತೆಗಳು ಜ. 31ರಿಂದ ನಿಷ್ಕ್ರಿಯ

ಫಾಸ್ಟ್ಯಾಗ್ ಬಳಕೆದಾರರೇ ಎಚ್ಚರ …! ಕೆವೈಸಿ ಪೂರ್ಣಗೊಳಿಸದ ಖಾತೆಗಳು ಜ. 31ರಿಂದ ನಿಷ್ಕ್ರಿಯ

ನವದೆಹಲಿ: ಖಾತೆಯಲ್ಲಿ ಅಗತ್ಯ ಮೊತ್ತ ಇದ್ದರೂ ಕೆವೈಸಿ ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಜ.31ರಿಂದ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದೆ ಇದ್ದರೆ ಬ್ಯಾಂಕ್‌ ಕಡೆಯಿಂದ ಫಾಸ್ಟ್ಯಾಗ್‌ ಖಾತೆಗಳು ನಿಷ್ಟ್ರಿಯವಾಗಲಿದೆ ಎಂದು ಪ್ರಾಧಿಕಾರ ತಿಳಿಸಿದೆ.”

ಒಂದು ವಾಹನ, ಒಂದು ಫಾಸ್ಟ್ಯಾಗ್‌” ಅಭಿಯಾನದಡಿಯಲ್ಲಿ ಫಾಸ್ಟ್ಯಾಗ್‌ನ ಉತ್ತಮ ಅನುಭವವನ್ನು ಹೆಚ್ಚಿಸಲು ಎಲೆಕ್ಟ್ರಾನಿಕ್‌ ಟೋಲ್‌ ವ್ಯವಸ್ಥೆಯನ್ನು ಸುಗಮಗೊಳಿಸಿ ಮತ್ತು ತಡರಹಿತ ಸೇವೆ ಒದಗಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕೆಲವರು ಒಂದೇ ಫಾಸ್ಟ್ಯಾಗ್‌ನ್ನು ಹಲವು ವಾಹನಗಳಿಗೆ ಬಳಸಲಾಗುತ್ತಿದ್ದು, ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜ್ಯ