ಉಡುಪಿ: ಖಾಲಿ ಜಾಗದಲ್ಲಿ ಆಕಸ್ಮಿಕ ಅಗ್ನಿ ದುರಂತ: ಗಿಡ ಮರಗಳು ಬೆಂಕಿಗಾಹುತಿ..!

ಉಡುಪಿ: ಖಾಲಿ ಜಾಗದಲ್ಲಿ ಆಕಸ್ಮಿಕ ಅಗ್ನಿ ದುರಂತ: ಗಿಡ ಮರಗಳು ಬೆಂಕಿಗಾಹುತಿ..!

ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಕಟ್ಟಡವೊಂದರ ಹಿಂಭಾಗದ ಖಾಲಿ ಜಾಗದಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿದ ಘಟನೆ ನಡೆದಿದೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಖಾಲಿ ನಿವೇಶನ ಒಂದರಲ್ಲಿನ ಹುಲ್ಲು, ಕುರುಚಲು ಗಿಡಗಳಿಗೆ ಆಕಸ್ಮಿಕ ವಾಗಿ ಬೆಂಕಿ ತಗುಲಿ ಬೆಂಕಿಯ ಕೆನ್ನಾಲಿಗೆಗೆ ಸ್ಥಳದಲ್ಲಿದ್ದ ಕುರುಚಲು ಗಿಡಗಳು ಆಹುತಿಯಾಗಿವೆ.

ಬಿಸಿಲಿ‌ನ ತಾಪ ಮತ್ತು ಗಾಳಿಯಿಂದಾಗಿ ಬೆಂಕಿ ಬೇಗನೆ ವ್ಯಾಪಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ.

ರಾಜ್ಯ