ಉಪ್ಪಿನಂಗಡಿ – ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆಯಾಗಿದ್ದಕ್ಕೆ ಮದುವೆಯಾದ ಯುವಕನ ಬೈಕ್ ಸುಟ್ಟ ಪಾಗಲ್ ಪ್ರೇಮಿ ಅರೆಸ್ಟ್

ಉಪ್ಪಿನಂಗಡಿ – ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆಯಾಗಿದ್ದಕ್ಕೆ ಮದುವೆಯಾದ ಯುವಕನ ಬೈಕ್ ಸುಟ್ಟ ಪಾಗಲ್ ಪ್ರೇಮಿ ಅರೆಸ್ಟ್

ಉಪ್ಪಿನಂಗಡಿ : ಜ.12 ತಾನು ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆ ಆಗಿದ್ದಕ್ಕೆ ಪ್ರತೀಕಾರವಾಗಿ ದ್ವಿಚಕ್ರವಾಹನವೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ರೀತಿ ಮಾಡಿದ್ದನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಯನ್ನು ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಪಾದಾಳದ ಸಂದೀಪ್ ಎಂದು ಗುರುತಿಸಲಾಗಿದೆ. ಈತ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಆದರೆ ಆತನದು ಏಕಮುಖ ಪ್ರೀತಿಯಾಗಿತ್ತು.

ಯುವತಿಗೆ ಜನವರಿ 3ರಂದು ವಿವಾಹವಾಗಿತ್ತು. ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾದ ವ್ಯಕ್ತಿಯ ಮೇಲೆ ಆರೋಪಿಗೆ ಸಿಟ್ಟಿತ್ತು. ಯುವತಿ ಜನವರಿ 6ರಂದು ಗಂಡನ ಜೊತೆ ತವರಿಗೆ ಬಂದಿದ್ದಳು. ಅಂದು ರಾತ್ರಿ ಅವರ ಮನೆಯ ಸಮೀಪ ಬೈಕ್‌ ಹೊತ್ತಿ ಉರಿಯುತ್ತಿದ್ದುದನ್ನು ಸಂಬಂಧಿಯೊಬ್ಬರು ಗಮನಿಸಿದ್ದರು. ಅದು ವರನ ಬೈಕ್‌ ಎಂದು ಬಳಿಕ ಗೊತ್ತಾಗಿತ್ತು. ಅದನ್ನು ಮನೆಯಿಂದ 100 ಮೀ ದೂರಕ್ಕೆ ಒಯ್ದು ಬೆಂಕಿ ಹಚ್ಚಲಾಗಿತ್ತು.

ಈ ಬಗ್ಗೆ ವರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.ತಾನು ಪ್ರೀತಿಸಿದ್ದ ಯುವತಿಯನ್ನು ಮದುವೆಯಾದ ವ್ಯಕ್ತಿಯ ಮೇಲಿನ ದ್ವೇಷದಿಂದ ಆತನ ಬೈಕ್‌ ಸುಟ್ಟುಹಾಕಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ