
ಬಹರೈನ್ ಶೋರ್ ಅಂಗ್ಲೇರ್ಸ್ (BSA) ವತಿಯಿಂದ 2023 ಡಿಸೆಂಬರ್ 1 ರಿಂದ 31 ರ ವರೆಗೆ ನಡೆಸಿಕೊಂಡು ಬಂದ ಶೋರ್ ಫಿಶಿಂಗ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಜನವರಿ 5 ರಂದು ಬಹರೈನ್ ಮನಾಮದಲ್ಲಿರುವ ಕೆ ಸಿಟಿ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಾಸಿರ್ ತೆಕ್ಸಿಮ್ ಸರ್ವರನ್ನೂ ಸ್ವಾಗತಿಸಿ, ಅಧ್ಯಕ್ಷತೆ ವಹಿಸಿದ ಮುಹಮ್ಮದ್ ರಾಫಿ ಮಾಂದಿರುತ್ತಿ ದಿಕ್ಸೂಚಿ ಭಾಷಣ ಮಾಡಿದರು.


ಬಹುಮಾನ ವಿತರಣೆಯ ಜೊತೆಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಕಲಾ ಕಾರ್ಯಕ್ರಮ ಕೂಡಾ ಬಹಳ ವಿಜೃಂಭಣೆಯಿಂದ ಜರುಗಿತು.ಸ್ಪರ್ಧೆಯ ಪ್ರಥಮ ಬಹುಮಾನವನ್ನು ರೆಜಿ ಮಾಥ್ಯೂ 15.750 ಕೆ.ಜಿ ಕಿಂಗ್ ಫಿಶ್ , ದ್ವಿತೀಯ ಬಹುಮಾನ ಕಬೀರ್ 7.350 ಕೆ.ಜಿ ಕಿಂಗ್ ಫಿಶ್ ಹಿಡಿದು ವಿಜಯಿಗಳಾಗಿ ಹೊರ ಹೊಮ್ಮಿದರು.

ಜೂನಿಯರ್ ವೇಲ್ ಫಿಶಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪ್ರಣವ್ ಎಸ್ ಅರುಣ್, ದ್ವಿತೀಯ ಸ್ಥಾನವನ್ನು ಮುಹಮ್ಮದ್ ಬಿಲಾಲ್ ಬಿಳಿಯಾರ್, ತೃತೀಯ ಸ್ಥಾನವನ್ನು ಮುಹಮ್ಮದ್ ಅಮೀನ್ ಅನ್ವರ್ ಹಾಗೂ ಚತುರ್ಥ ಬಹುಮಾನವನ್ನು ರಯ್ಯಾನ್ ಅಬ್ದುಲ್ ರಶೀದ್ ರವರು ಪಡೆದುಕೊಂಡರು.ಸ್ಪರ್ದಾ ವಿಜೇತರಿಗೆ ಲಸೀನ್ ಜ್ಯುವೆಲರ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ರಹಮಾನ್ ಎ ಬುಹಸ್ಸಾ , ಡಿ ಟಿ ಎಸ್ ಡಾಲ್ಫಿನ್ ನ ಮ್ಯಾನೇಜಿಂಗ್ ಡೈರೆಕ್ಟರ್ ನಿಜೋ, ಅಡತ್ತೋಡಿ ಭಾಸ್ಕರ್ ಮುಂತಾದ ಗಣ್ಯರ ಸಮ್ಮುಖದಲ್ಲಿ ನಗದು ಹಾಗೂ ಬಹುಮಾನವನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸುಳ್ಯ ಮೂಲದ ಅನಿವಾಸಿ ಭಾರತೀಯ ಅಶ್ರಫ್ ಬಿಳಿಯಾರ್ ರವರ ಹುಟ್ಟು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಈ ಒಂದು ಕಾರ್ಯಕ್ರಮ ಆಯೋಜಕರಾದ ಉಸ್ಮಾನ್ ಕೂರಿಯಾಡ್ ಮಾತನಾಡಿ ಬಹರೈನ್ ಇತಿಹಾಸದಲ್ಲಿ ಇಂತಹ ಒಂದು ಫಿಶಿಂಗ್ ಸ್ಪರ್ಧೆ ಇಷ್ಟು ದೊಡ್ಡ ಮಟ್ಟದಲ್ಲಿ ನಡೆದದ್ದು ಪ್ರಥಮ ಬಾರಿ ಎಂದು ಹೆಮ್ಮೆ ಪಟ್ಟರು.

ಇವರ ಈ ಒಂದು ಯಶಸ್ವಿ ಕಾರ್ಯಕ್ರಮ ಆಯೋಜನೆಗೆ ಜೋಬಿನ್ ಜೋನ್,ಅಬ್ದುಲ್ ರಶೀದ್, ಅರುಣ್ ಸಾವಿಯರ್,ಜೀಶಂ, ನಾಸಿರ್ ಟೆಕ್ಸಿಂ,ಮುಹಮ್ಮದ್ ರಾಫಿ ಮಾಂದಿರುತ್ತಿ ಮೊದಲಾದವರು ಸಹಕರಿಸಿದರು.


