
ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಸಿ.ಎ. ಬ್ಯಾಂಕ್) ಇದರ ಅಧ್ಯಕ್ಷತೆಗೆ ವಿಕ್ರಂ ಅಡ್ಪಂಗಾಯ ಹಾಗೂ ಉಪಾಧ್ಯಕ್ಷತೆಗೆ ನ್ಯಾಯವಾದಿ ಚಂದ್ರಶೇಖರ ನಡುಮನೆ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೆ ಸುಳ್ಯ ದ ಹಿರಿಯ ಬಿ ಜೆಪಿ ಕಾರ್ಯಕರ್ತ ಸಿ ಎ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷತೆಗೆ ತೀವ್ರ ಆಕಾಂಕ್ಷಿಯಾಗಿದ್ದ, ಎನ್ ಎ ರಾಮಚಂದ್ರ ರಾಜಿನಾಮೆಯ ಅಸ್ತ್ರ ಪ್ರಯೋಗಿಸಿದ್ದಾರೆ, .ಈ ಬಗ್ಗೆ ನ್ಯೂಸ್ ರೂಮ್ ಫಸ್ಟ್ ಜೊತೆ ಮಾತನಾಡಿದ ಎನ್ ಎ ರಾಮಚಂದ್ರರು,ಸುಳ್ಯದಲ್ಲಿ ತಳ ಮಟ್ಟದಿಂದ ಪಕ್ಷ ಕಟ್ಟಿ ಬೆಳೆಸುವಲ್ಲಿ ಅವಿರತವಾಗಿ ದುಡಿದಿದ್ದೇನೆ, ಆದರೆ ಈಗಿನವರು ರಾಜಕೀಯ ಅಗೌರವ ತೋರುತ್ತಿದ್ದಾರೆ.ಸುಳ್ಯ ಮಂಡಲ ಸಮಿತಿ ಬದಲಾಗಬೇಕು ಈಗಿನ ಅದ್ಯಕ್ಷ ಹರೀಶ್ ಕಂಜಿಪಿಲಿ ಅದ್ಯಕ್ಷತೆ ಮತ್ತು ಕಾರ್ಯದರ್ಶಿ ಸುಭೋದ್ ಬದಲಾಗುವವರೆಗೆ ಹಾಗೂ ಇನ್ನು ಕೆಲವರು ಇರುವವರೆಗೆ ಪಕ್ಷ ಸಂಘಟನೆಯಲ್ಲಿ ತೊಡಗುವುದಿಲ್ಲ,ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಪಕ್ಷದೊಳಗೆ ನಡೆದ ಈ ಆಯ್ಕೆ ಎತ್ತ ಸಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ

