ಪೋಸ್ಕೊ ಪ್ರಕರಣದಲ್ಲಿ ಆರೋಪಿಯಾಗಿದ್ದು ತಲೆಮೆರೆಸಿಕೊಂಡಿದ್ದ ಸುಳ್ಯದ ಆರೋಪಿಯ ಬಂಧನ.

ಪೋಸ್ಕೊ ಪ್ರಕರಣದಲ್ಲಿ ಆರೋಪಿಯಾಗಿದ್ದು ತಲೆಮೆರೆಸಿಕೊಂಡಿದ್ದ ಸುಳ್ಯದ ಆರೋಪಿಯ ಬಂಧನ.

ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019 ರಲ್ಲಿ ಪೋಸ್ಕೊ ಪ್ರಕರಣಕ್ಕೆ ಸಂಭಂದಿಸಿದಂತೆ ಆರೋಪಿಯಾಗಿದ್ದ ಸುಳ್ಯದ ಕಳಂಜ ನಿವಾಸಿಯನ್ನು ಬಂಧಿಸಲಾಗಿದೆ.ಕಳಂಜ ಗ್ರಾಮ, ಸುಳ್ಯ ನಿವಾಸಿ ರಾಜೇಶ ಎಂಬವರನ್ನು, ಬೆಳ್ಳಾರೆ ಠಾಣಾ ಪಿಎಸ್ಐ ಅಶೋಕ್ ಸಿ ಎಮ್ ಹಾಗೂ ಸಿಬ್ಬಂದಿಗಳಾದ ಪ್ರವೀಣ ಬಾರ್ಕಿ ಮತ್ತು ಸಂತೋಷ್ ಕೆ ಜಿ ರವರುಗಳು ಕಳಂಜ ಗ್ರಾಮದ ಕಿಲಂಗೋಡಿ ಎಂಬಲ್ಲಿ ದಸ್ತಗಿರಿ ಮಾಡಿ  ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ   ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ. ಈತ ಅ.ಕ್ರ 46/2019 ಕಲಂ:-376,506 IPC AND 4 ,6 POCSO ACT ಪ್ರಕರಣದಲ್ಲಿ, ಆರೋಪಿಯಾಗಿ ತಲೆಮರೆಸಿಕೊಂಡಿದ್ದ .

ರಾಜ್ಯ