
ಹಲವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯ ಅಕ್ರ:126/2017 ಕಲಂ:379 r/w 34 IPC ಪ್ರಕರಣ ದಾಖಲಾಗಿದ್ದು ಆರೋಪಿ ನರಿಂಗಾನ ಗ್ರಾಮ ಬಂಟ್ವಾಳ ನಿವಾಸಿ ಸಿದ್ದೀಕ್ ಕೆ.ಎಮ್(46) ಎಂಬಾತ ತಲೆಮರೆಸಿಕೊಂಡಿದ್ದ.
ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆರೋಪಿಯು ತಪ್ಪು ಒಪ್ಪಿಕೊಂಡಿದ್ದು, ನ್ಯಾಯಾಲಯವು ರೂ. 11.000/- ದಂಡವನ್ನು ವಿಧಿಸಲಾಗಿದೆ.
ಸದ್ರಿ ಪ್ರಕರಣವು ಮರಳು ಸಾಗಾಟದ ಪ್ರಕರಣವಾಗಿದ್ದು, ಆರೋಪಿಯ ಬಗ್ಗೆ ಯಾವುದೇ ದಾಖಲೆ/ ಭಾವಚಿತ್ರ ಇಲ್ಲದೇ ಇದ್ದುದರಿಂದ ದಸ್ತಗಿರಿಗೆ ತೊಡಕಾಗಿದ್ದು, ಲಾರಿಯ ದಾಖಲಾತಿಯ ಬಗ್ಗೆ ASI ಜಯರಾಮರವರು ಜಿಲ್ಲೆಯ RTO ಕಚೇರಿಗಳಿಂದ ಮತ್ತು LIC ಕಚೇರಿಯಿಂದ ಆರೋಪಿಗೆ ಸಂಬಂಧ ಪಟ್ಟ ದಾಖಲಾತಿ ಮತ್ತು ಭಾವ ಚಿತ್ರವನ್ನು ಸಂಗ್ರಹಿಸಿ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿರುತ್ತಾರೆ.
