ಅರ‌ಂತೋಡು: ಅಡ್ಕಬಳೆಯಲ್ಲಿ ಚಿರತೆ ದಾಳಿಗೆ ಕರು ಬಲಿ.

ಅರ‌ಂತೋಡು: ಅಡ್ಕಬಳೆಯಲ್ಲಿ ಚಿರತೆ ದಾಳಿಗೆ ಕರು ಬಲಿ.

ಅರಂತೋಡು: ಅಡ್ಕಬಳೆಯಲ್ಲಿ ಚಿರತೆ ದಾಳಿಗೆ ಕರು ಬಲಿಯಾಗಿರುವ ಘಟನೆ ವರದಿಯಾಗಿದೆ.ಎರಡು ದಿನಗಳ ಹಿಂದೆ ಮೂರು ಆಡುಗಳನ್ನು ಬಲಿ ಪಡೆದಿದ್ದ ಚಿರತೆ ಇದೇ ಮನೆಯ ಎರಡು ವರ್ಷದ ಕರುವೊಂದನ್ನು ಬಲಿ ಪಡೆದ ಘಟನೆ ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಜ.7ರಂದು ಸಂಭವಿಸಿದೆ.

ಅರಂತೋಡು ಗ್ರಾಮದ ಅಡ್ಕಬಳೆಯ ಶ್ರೀಮತಿ ಲೀಲಾವತಿ ಎಂಬವರ ಮನೆಯ ತೋಟದಲ್ಲಿ ಕರುವನ್ನು ಮೇಯಲು ಬಿಟ್ಟಿದ್ದು, ಸಂಜೆಯಾದರೂ, ಕರು ಬರದೇ ಇದ್ದ ಕಾರಣ ಮನೆಯವರು ತೋಟಕ್ಕೆ ಹೋಗಿ ನೋಡಿದ ವೇಳೆ ಕರುವಿನ ಮೃತದೇಹ ಅರ್ಧ ತಿಂದ ರೀತಿಯಲ್ಲಿ ಪತ್ತೆಯಾಗಿದ್ದು, ಚಿರತೆ ದಾಳಿಯಿಂದ ಕರು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಇದೇ ಮನೆಯಲ್ಲಿ ಸಾಕುತ್ತಿದ್ದ ಮೂರು ಆಡುಗಳನ್ನು ರಾತ್ರಿ ಸಮಯದಲ್ಲಿ ಚಿರತೆ ಕೊಂದು ಹಾಕಿತ್ತು.

ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಭಯಬೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.

ರಾಜ್ಯ