
ಸುಳ್ಯ ಚೆನ್ನಕೇಶವ ಜಾತ್ರೋತ್ಸವದ ಅಂಗವಾಗಿ ನ್ಯೂಸ್ ನಾಟ್ ಔಟ್ ಮತ್ತು ಸುರೇಶ್ ಶೆಟ್ಟಿ ಈವೆಂಟ್ ಮ್ಯಾನೇಜಮೆಂಟ್ ನಲ್ಲಿ ಅದ್ಧೂರಿಯ ಸುಳ್ಯೋತ್ಸವಕ್ಕೆ ಜ .7 ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರಿನ ವೇದಿಕೆಯಲ್ಲಿ ಚಾಲನೆ ನೀಡಲಾಯಿತು. ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ದೀಪ ಬೆಳಗಿಸಿ ಶುಭ ಹಾರೈಸಿದರು, ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ ಕೆ.ಸಿ, ಚೆನ್ನಕೇಶವ ದೇವಸ್ಥಾನದ ಜೀರ್ಣೋಧ್ದಾರ ಸಮಿತಿ ಸದಸ್ಯೆ ಮೀನಾಕ್ಷಿ ಗೌಡ, ನ್ಯೂಸ್ ನಾಟ್ ಔಟ್ ಡಿಜಿಟಲ್ ಮಾಧ್ಯಮ್ ಪ್ರಧಾನ ಸಂಪಾದಕ ಹೇಮಂತ್ ಸಂಪಾಜೆ, ಅಡ್ಕಾರ್ ಕಾಮತ್ ಕ್ಯಾಶ್ಯೂಸ್ ಮಾಲಕ ಸುಧಾಕರ ಕಾಮತ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿ ಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.



