
ಸುಳ್ಯ ಖಾಸಾಗಿ ಬಸ್ ನಿಲ್ದಾಣದ ಬಳಿ ರಿಕ್ಷಾಚಾಲಕರು ಸೇರಿ ಅಳವಡಿಸಿದ್ದ ಬ್ಯಾನರನ್ನು ಹರಿದು ಹಾಕಿರುವ ಕಿಡಿಗೇಡಿ ಕೃತ್ಯ ನಡೆದಿದೆ, ರಿಕ್ಷಾ ಚಾಲಕರು ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವ , ಮತ್ತುಅಯೋದ್ಯೆಯಲ್ಲಿ ಶ್ರೀ ರಾಮ ದೇವಸ್ಥಾನ ಮತ್ತು ಶ್ರೀರಾಮನ ಪೋಟೊ ಮತ್ತು ರಿಕ್ಷಾ ಚಾಲಕರ ಬೆಳ್ಳಿ ಹಬ್ಬ ಸಂಭ್ರಮದ ಬೃಹತ್ ಬ್ಯಾನರನ್ನು ಖಾಸಾಗಿ ಬಸ್ ನಿಲ್ದಾಣದ ಬಳಿ ಅಳವಡಿಸಿದ್ದರು, ಆದರೆ ಕಿಡಿಗೇಡಿಗಳು ಶ್ರೀರಾಮಂದ್ರನ ಪೋಟೊ ಇದ್ದ ಭಾಗದಲ್ಲಿ ಬ್ಯಾನರ್ ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ, ಈ ಬಗ್ಗೆ ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತ ಪಡಿಸಿದ್ದು ,ವಿಕೃತಿ ಮೆರೆದ ಕಿಡಿಗೇಡಿಗಳ ಪತ್ತೆಗೆ ಪೋಲಿಸ್ ಮೊರೆಹೊಗಿದ್ದಾರೆ ಎಂದು ತಿಳಿದು ಬಂದಿದೆ.


