ಬೆಳ್ಳಾರೆ : ಪವರ್ ಟಿ.ವಿ. ರಾಕೇಶ್ ರೈ ಮೇಲಿನ ಕೇಸು ಹಿಂಪಡೆಯುವಂತೆ ಒತ್ತಾಯಿಸಿ ಮಹಿಳೆಗೆ ಆಸಿಡ್ ಎರಚಿ ಪ್ರಾಣ ತೆಗೆಯುವ ಜೀವ ಬೆದರಿಕೆ:ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಬೆಳ್ಳಾರೆ : ಪವರ್ ಟಿ.ವಿ. ರಾಕೇಶ್ ರೈ ಮೇಲಿನ ಕೇಸು ಹಿಂಪಡೆಯುವಂತೆ ಒತ್ತಾಯಿಸಿ ಮಹಿಳೆಗೆ ಆಸಿಡ್ ಎರಚಿ ಪ್ರಾಣ ತೆಗೆಯುವ ಜೀವ ಬೆದರಿಕೆ:ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಳ್ತಿಗೆಯಿಂದ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ವಿರುದ್ದ ನೀಡಲಾದ ಕೇಸು ವಾಪಾಸು ಪಡೆಯುವಂತೆ ಒತ್ತಾಯಿಸಿ ಮಹಿಳೆಯೋರ್ವರಿಗೆ ಜೀವ ಬೆದರಿಕೆ ಒಡ್ಡಿದ ಘಟನೆ ವರದಿಯಾಗಿದೆ.

ಜ.05ರಂದು ಕೊಳ್ತಿಗೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿರುವುದಾಗಿ ಮಹಿಳೆಯೋರ್ವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ‌ ದೂರು ನೀಡಿದ್ದು, 11 ಮಂದಿ ವಿರುದ್ದ‌ ಕೇಸು ದಾಖಲಾಗಿದೆ.

ಚಿತ್ರಪ್ರಭಾ ರೈ ಎಂಬವರು ಪೊಲೀಸ್ ದೂರು ನೀಡಿದ್ದು ದೂರಿನಲ್ಲಿ,ಜ.05ರಂದು ಸಂಜೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕೊಳಿಗೆ ಸ್ಥಳ ಮನೆ ಎಂಬಲ್ಲಿ ನಾನು ಮನೆಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಆರೋಪಿಗಳಾದ ಪ್ರದೀಶ್ ಶೆಟ್ಟಿ , ಭಾಸ್ಕರ ರೈ ಧರ್ಮಸ್ಥಳ, ರವೀಂದ್ರ ಶೆಟ್ಟಿ , ಬಾಲಕೃಷ್ಣ ಶೆಟ್ಟಿ , ಸರಳ ರೈ , ಜಯಶ್ರೀ ಶೆಟ್ಟಿ , ಕನ್ಯಾಕುಮಾರಿ ರೈ , ಕಾವ್ಯಾ ರೈ , ಅಮಿತಾ ರೈ , ವಾರಿಜಾ ರೈ , ಯತೀಂದ್ರನಾಥ ಶೆಟ್ಟಿ , ಹಾಗೂ ಇತರ ಅಪರಿಚಿತ ಇಬ್ಬರು ಮಹಿಳೆಯರು ಹಾಗೂ 6 ಪುರುಷರು ಗುಂಪು ಸೇರಿ ನನ್ನನ್ನು ತಡೆದು ನಿಲ್ಲಿಸಿ ಪವರ್ ಟಿವಿಯ ರಾಕೇಶ್ ಶೆಟ್ಟಿ ಮತ್ತು ಪ್ರಶಾಂತ ಎಂಬವರ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ದಾಖಲಾದ ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ನಿಮಗೆ ಆಸಿಡ್ ಎರಚುತ್ತೇನೆ ಹಾಗೂ ಕುಟುಂಬದವರ ಪ್ರಾಣ ತೆಗೆಯುತ್ತೇವೆ ಮನೆಗೆ ಬೆಂಕಿ ಇಡುತ್ತೇವೆ ಎಂದು ಬೆದರಿಕೆ ಒಡ್ಡಿ ಹಲ್ಲೆ ನಡೆಸಲು ಯತ್ನಿಸಿದ್ದು ಹಾಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ.

ಆರೋಪಿಗಳು ವಾಹನ ನಂ KA19MH5201 KA2005373 & KA2102728 ನೇಯದ್ದರಲ್ಲಿ ಸ್ಥಳಕ್ಕೆಬಂದಿರುತ್ತಾರೆ. ಪವರ್ ಟಿವಿಯ ರಾಕೇಶ್ ಶೆಟ್ಟಿ ಹಾಗೂ ಪ್ರಶಾಂತ್ ಎಂಬವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ರಾಜ್ಯ