ಅಯೋಧ್ಯೆಯ ರಾಮಮಂದಿರ ಹಾಗೂ ಸುಳ್ಯ ಜಾತ್ರೋತ್ಸವಕ್ಕೆ ಶುಭ ಕೋರಿ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣ:ಸುಳ್ಯ JDS ಖಂಡನೆ.

ಅಯೋಧ್ಯೆಯ ರಾಮಮಂದಿರ ಹಾಗೂ ಸುಳ್ಯ ಜಾತ್ರೋತ್ಸವಕ್ಕೆ ಶುಭ ಕೋರಿ ಅಳವಡಿಸಲಾಗಿದ್ದ ಬ್ಯಾನರ್ ಹರಿದ ಪ್ರಕರಣ:ಸುಳ್ಯ JDS ಖಂಡನೆ.

 ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿ ಸುಳ್ಯ ತಾಲೂಕು ಆಟೋ ಚಾಲಕರು ಹಾಗೂ ಮಾಲಕರ ಸಂಘದ ವತಿಯಿಂದ  ಅಯೋಧ್ಯೆಯ ರಾಮಮಂದಿರ ಹಾಗೂ ಸುಳ್ಯ ಜಾತ್ರೋತ್ಸವಕ್ಕೆ ಶುಭ ಕೋರಿ ಅಳವಡಿಸಲಾಗಿದ್ದ ಬ್ಯಾನರ್ ಗಳನ್ನು ಇಂದು ಮುಂಜಾನೆ ಯಾರೋ ಕಿಡಿಗೇಡಿಗಳು ಹರಿದು ಹಾಳುಗೆಡವಿ ವಿಕೃತಿಯನ್ನು ಮೆರೆದಿರುತ್ತಾರೆ. ಈ ಪ್ರಕರಣವನ್ನು ಪೋಲಿಸ್ ಇಲಾಖೆ ಈ ಕೂಡಲೇ ಬೇಧಿಸಿ ಅಪರಾಧಿಗಳನ್ನು ಕಂಡುಹಿಡಿದು ಬಂಧಿಸಿ ಶಿಕ್ಷಿಸುವಂತೆಯೂ ಆಗ್ರಹಿಸುತ್ತದೆ. ಹಾಗೆಯೇ ಸಾರ್ವಜನಿಕರು  ತಾಳ್ಮೆ ಮತ್ತು ಸಂಯಮದಿಂದ  ವರ್ತಿಸಬೇಕಾಗಿ ಸುಳ್ಯ ತಾಲೂಕು ಜನತಾದಳ (ಜಾ) ಮನವಿ ಮಾಡಿದೆ.
ರಾಜ್ಯ