
ಕಡಬ:ಜ .04 ಗುರುವಾರ ತಡರಾತ್ರಿ ಕಡಬ ಠಾಣಾ ವ್ಯಾಪ್ತಿಯ ಆತೂರು ಕೊಯಿಲ ಎಂಬಲ್ಲಿ ಮನೆಗೆ ಬೀಗ ಹಾಕಿ ಮನೆ ಮಂದಿ ಆತೂರು ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ನಡೆದಿದೆ.

ಆತೂರು ಕೊಯಿಲ ಸಮೀಪದ ಕಲಾಯಿ ನಿವಾಸಿ ಯಾಕುಬ್ ಎಂಬವರ ಮನೆಯ ಬೀಗ ಮುರಿದ ಕಳ್ಳರು, ನಗದನ್ನು ದೋಚಿದ್ದಾರೆ. ಪಕ್ಕದಲ್ಲಿರುವ ಮನೆಯೊಂದರ ಬೀಗ ಮುರಿಯುವ ವೇಳೆ ಆಟೋ ರಿಕ್ಷಾ ಆಗಮಿಸುವುದನ್ನು ನೋಡಿದ ಕಳ್ಳರು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
