ಅಕ್ರಮ ಮರಳು ಸಾಗಾಟ ಪ್ರಕರಣ , ಲಾರಿ ಸೇರಿದಂತೆ ಚಾಲಕ ಪೋಲಿಸ್ ವಶ

ಅಕ್ರಮ ಮರಳು ಸಾಗಾಟ ಪ್ರಕರಣ , ಲಾರಿ ಸೇರಿದಂತೆ ಚಾಲಕ ಪೋಲಿಸ್ ವಶ

ಅಕ್ರಮ ಮರಳುಗಣಿಗಾರಿಕೆ ನಡೆಸುತ್ತಿರು ಆರೋಪದಲ್ಲಿ ಸುಳ್ಯ ಪೋಲಿಸರು ಲಾರಿ ಹಾಗು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸುಳ್ಯ ತಾಲೂಕಿನಾಧ್ಯಂತ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಮಂಡೆಕೋಲು ಗ್ರಾಮಕ್ಕೆ ಒಳಪಡುವ ಪರಿಸರದ ಪಯಸ್ವಿನಿ ನದಿಯಯಲ್ಲಿ ಅವ್ಯಾಹುತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಯನ್ನು ಪೋಲಿಸ್ ಅಧಿಕಾರಿ ಸರಸ್ವತಿ ಬಿ ಟಿ ನೇತ್ರತ್ವದ ತಂಡ ಬಂದಿಸಿದೆ. ಅಡ್ಕಾರ್ ಸುಬ್ರಹ್ಮಣ್ಯ ದೇವಾಲಯದ ದ್ವಾರದ ಬಳಿಯಲ್ಲಿ ಕೆಎ – 12 ಬಿ 2766 ಲತೀಫ್ ಅಡ್ಕಾರ್ ರವರ ಮಾಲಕತ್ವದ ಲಾರಿಯ ಚಾಲಕ ಮಹಮ್ಮದ್ ಬಶೀರ್ ಹಾಗು ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ

ರಾಜ್ಯ