ಸುಳ್ಯದ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯಲ್ಲಿವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಸುಳ್ಯದ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯಲ್ಲಿವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಸುಳ್ಯದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಗ್ರೀನ್ ವ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.ಸುಳ್ಯ ತಾಲೂಕು ಕ್ರೀಡಾಧಿಕಾರಿಗಳೂ ಹಾಗೂ ಐವರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರೂ ಆದ ಸೂಫಿ ಪೆರಾಜೆಯವರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.


ಕ್ರೀಡಾ ಪ್ರಮಾಣ ವಚನವನ್ನು ಶಾಲಾ ಸಂಚಾಲಕ ಎಸ್.ಎಂ ಅಬ್ದುಲ್ ಹಮೀದ್, ಸಹ ಶಿಕ್ಷಕಿ ರೇಶ್ಮಾ ಮೂಲಕ ಬೋಧಿಸಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಂ.ಅಬ್ದುಲ್ ಮಜೀದ್ ಕ್ರೀಡಾ ಧ್ವಜಾರೋಹಣ ಮಾಡಿದರು,
“ಕ್ರೀಡಾಕೂಟವು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸುವ ಅವಕಾಶ ಮಾತ್ರವಲ್ಲದೆ ದೈಹಿಕ ಕ್ಷಮತೆಯನ್ನೂ ನೀಡುತ್ತದೆ, ಆದ್ದರಿಂದ ಈ ಅವಕಾಶವನ್ನು ಸದುಪಯೋಗಿಸಿಕೊಳ್ಳಿ” ಎಂದು ಸೂಫಿ ಪೆರಾಜೆ ತಮ್ಮ ಉದ್ಘಾಟನಾ ಮಾತುಗಳನ್ನಾಡಿದರು.
ಆರಂಭದಲ್ಲಿ ನಾಲ್ಕು ತಂಡಗಳ ವರ್ಣರಂಜಿತ ಪಥಸಂಚಲನದಲ್ಲಿ ಅವರು ಗೌರವ ವಂದನೆ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾ ಗಿಡಕ್ಕೆ ಮೀಫ್ ಉಪಾಧ್ಯಕ್ಷ ಕೆ.ಎಂ. ಮುಸ್ತಾಫಾ ನೀರುಳಿಸಿದರು.
ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಶಾಲಾ ಫುಟ್ಬಾಲ್ ತಂಡದ ಸದಸ್ಯರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ ಸ್ಮರಣಿಕೆ ನೀಡಿ ಗೌರವಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎ.ಅಬ್ದುಲ್ಲಾ ನಾವೂರು, ಆದಳಿತ ಮಂಡಳಿ ನಿರ್ದೇಶಕ ರುಗಳಾದ ಕೆ.ಬಿ.ಇಬ್ರಾಹಿಂ, ಮಾಜೀ ಸಂಚಾಲಕ ಕೆ.ಎಂ.ಮೊಹಿಯುದ್ದೀನ್, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ, ಪಿಟಿಎ ನಿರ್ದೇಶಕರುಗಳಾದ ಸಿದ್ದೀಕ್ ಕಟ್ಟೆಕಾರ್, ಶ್ರೀಮತಿ ತಾಹಿರಾ ಮೊದಲಾದವರು ಉಪಸ್ಥಿತಿತರಿದ್ದರು.ಆರಂಭದಲ್ಲಿ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ ಸ್ವಾಗತಿಸಿ, ಸಹಶಿಕ್ಷಕಿ ಅಶ್ವಿನಿ ವಂದಿಸಿದರುಶಿಕ್ಷಕ ರಂಜಿತ್ ಕಾರ್ಯಕ್ರಮ ನಿರೂಪಿಸಿದರು,
ಶಿಕ್ಷಕ ಮಂಜುನಾಥ್ ಮತ್ತು ದೈಹಿಕ ಶಿಕ್ಷಕಿ ಶ್ರೀಮತಿ ಭವ್ಯ ಸಹಕರಿಸಿದರು.

ರಾಜ್ಯ