ಕಿಡ್ನಾಪ್ ಆಗಿದ್ದ ಜೆಸಿಬಿ ಆಪರೇಟರ್ ನ ಶವ ಆಗುಂಬೆ ಘಾಟ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ.

ಕಿಡ್ನಾಪ್ ಆಗಿದ್ದ ಜೆಸಿಬಿ ಆಪರೇಟರ್ ನ ಶವ ಆಗುಂಬೆ ಘಾಟ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ.

ಅನೈತಿಕ ಸಂಬಂಧದ ಕಾರಣದಿಂದಜೆಸಿಬಿ ಆಪರೇಟರ್‌ನನ್ನು ಕಿಡ್ನಾಪ್ ಮಾಡಿ,ಕೊಲೆಗೈದು ಆಗುಂಬೆ ಘಾಟ್‌ ನಲ್ಲಿ ಬೀಸಾಡಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.ಹತ್ತಕ್ಕೂ ಅಧಿಕ ಜೆಸಿಬಿ ಹೊಂದಿರುವ ಕುಂಬ್ರದ ಉದ್ಯಮಿಯೋರ್ವರ ಜೆಸಿಬಿ ಆಪರೇಟರ್‌ ಮೃತ ದುರ್ದೈವಿ.

ಕುಂಬ್ರ ಮೂಲದ ಜೆಸಿಬಿ ಮಾಲಕ, ಉದ್ಯಮಿ ಮೋಹನ್‌ದಾಸ್ ರೈ ಜೊತೆ ಜೇಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಹನುಮಂತ (22) ಎಂಬವನ ಕಿಡ್ನಾಪ್ ಪ್ರಕರಣದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದ ತನಿಖೆ ಮುಂದುವರೆಸಿದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ (ಸಂಪ್ಯ ಠಾಣಾ) ಪ್ರಭಾರ ಠಾಣಾಧಿಕಾರಿ ರವಿ ಬಿ.ಎಸ್ ಇವರ ನೇತೃತ್ವದ ವಿಶೇಷ ತಂಡ ಈ ಪ್ರಕರಣದ ಬೆನ್ನು ಹಿಡಿದು ಇಬ್ಬರು ಆರೋಪಿಗಳಾದ ಶಿವಪ್ಪ, ಮಂಜುನಾಥನನ್ನು ಬಂಧಿಸಿದ್ದಾರೆ, ಇನ್ನೋರ್ವ ಆರೋಪಿ ದುರ್ಗಪ್ಪ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಬಾಗಲಕೋಟೆ ಜಿಲ್ಲೆ ಬಾದಮಿ ತಾಲೊಕಿನ ಡಾಣಕಶಿರೂರು ನಿವಾಸಿ ಹನುಮಂತ (22) ಮೃತಪಟ್ಟವರು . ಕುಂಬ್ರದ ಉದ್ಯಮಿ ಮೋಹನ್ ದಾಸ್ ರೈಯವರ ಟಿಪ್ಪರ್ ಚಾಲಕರನಾಗಿ ದುಡಿಯುತ್ತಿದ್ದ ಈತ, ಅಪಹರಣವಾದ 5 ದಿನದ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದನು. ನ 17 ರಂದು ಸಂಜೆ ಟಾಟಾ ಏಸ್‌ ವಾಹನದಲ್ಲಿ ಬಂದ ಆರೋಪಿಗಳಾದ ಶಿವಪ್ಪ, ಮಂಜುನಾಥ ಮತ್ತು ದುರ್ಗಾಪ್ಪ ನವರು ಕುಂಬ್ರ ಮಸೀದಿ ಬಳಿಯ ರೂಮ್ ನಿಂದ ಹನುಮಂತನನ್ನು ಅಪಹರಿಸಿಕೊಂಡು ಹೋಗಿದ್ದರು. ಮೂವರು ಆರೋಪಿಗಳಲ್ಲಿ ಒಬ್ಬ ವಾಹನ ಚಲಾಯಿಸುತ್ತಿದ್ದು, ಇಬ್ಬರು ಹಿಂದಿನ ಸೀಟ್‌ನಲ್ಲಿ ಕುಳಿತು ಹನುಮಂತನ ಕತ್ತು ಹಿಸುಕಿ, ಕಾಲಿನಿಂದ ಒದ್ದು,ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಿ, ಆಗುಂಬೆ ಘಾಟ್‌ನ ಮೂರನೇ ತಿರುವಿನ ನಲ್ಲಿ ಮೃತದೇಹ ಬಿಸಾಕಿರುತ್ತಾರೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.

ಅಪಹರಣ ನಡೆಯುವುದಕ್ಕೆ ಕೆಲವು ದಿನಗಳ ಹಿಂದೆ ಆರೋಪಿ ಶಿವಪ್ಪನು ಹನುಮಂತನ ಮಾವ ಮಂಜುನಾಥ ಎಂಬವರ ಬಳಿ ಹನುಮಂತ ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದು, ಅವನನ್ನು ಎಲ್ಲಿಯಾದರೂ ದೂರ ಕಳುಹಿಸು ಎಂದು ಹೇಳಿದ್ದನು. ಹೀಗಾಗಿ ನ 10 ರಂದು ಹನುಮಂತನನ್ನು ಮಂಜುನಾಥರವರು ತನ್ನ ಗೆಳೆಯ ಸಂತೋಷ್ ಗದ್ದಿ ಗೌಡ್ರನೊಂದಿಗೆ ಪುತ್ತೂರಿನ ಕುಂಬ್ರಕ್ಕೆ ಟಿಪ್ಪರ್ ಚಾಲಕನಾಗಿ ಕಳುಹಿಸಿ ಕೊಟ್ಟಿದ್ದರು.

ಇದಾದ ಬಳಿಕನ ನ 17 ರಂದು ಮಂಜುನಾಥನರವರಿಗೆ ಕರೆ ಮಾಡಿದ ಶಿವಪ್ಪ ನಿನ್ನ ಅಕ್ಕನ ಮಗ ಸಿಕ್ಕಲ್ಲಿ ಬಿಡುವುದಿಲ್ಲ ಎಂದು ಬೆದರಿಸಿದ್ದರು. ಇದನ್ನು ಮಂಜುನಾಥನವರು ತನ್ನ ಅಕ್ಕ ರೇಣವ್ವ ಮಾದರರವರ ಬಳಿ ತಿಳಿಸಿದ್ದಾರೆ. ಗಾಬರಿಯಾದ ಆಕೆ ಕುಂಬ್ರದಲ್ಲಿರುವ ಸಂತೋಷ್ ಗದ್ದಿ ಗೌಡ್ರರಿಗೆ ಕರೆ ಮಾಡಿ ತಿಳಿಸಿದ್ದು ಅಷ್ಟರಾಗಲೇ ಆರೋಪಿಗಳಾದ ಶಿವಪ್ಪ ಮಂಜುನಾಥ ಮತ್ತು ದುರ್ಗಾಪ್ಪ ನವರು ಹನುಮಂತನನ್ನು ಅಪಹರಿಸಿಕೊಂಡು ಹೋಗಿದ್ದರು .

ಆದರೇ ಸ್ಥಳಿಯ ಮೂಲಗಳ ಪ್ರಕಾರ ನ 17 ರಂದು ಕುಂಬ್ರಕ್ಕೆ ಬಂದಿದ್ದ ಶಿವಪ್ಪ, ಮಂಜುನಾಥ ಮತ್ತು ದುರ್ಗಾಪ್ಪನವರು ಹನುಮಂತನನ್ನು ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಜತೆಗಿದ್ದವರ ಬಳಿ ತಿಳಿಸಿ ಕರೆದುಕೊಂಡು ಹೋಗಿದ್ದರು. ಬಂದವರ ಪೋಟೋ ತೆಗೆದಿರಿಸುವಂತೆ ಟಿಪ್ಪರ್ ಮಾಲಕ ಮೋಹನ್‌ದಾಸ ರೈ ಅವರು ತನ್ನ ಕೆಲಸದವರಿಗೆ ಸೂಚಿಸಿದ್ದರು. ಹಾಗಾಗಿ ಕೆಲಸದವರು ಆ ಮೂವರು ಪೋಟೋವನ್ನು ಮೊಬೈಲ್‌ನಲ್ಲಿ ತೆಗೆಸಿ ಇಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ.

ರಾಜ್ಯ