ಮೂಲ್ಕಿ: ಲಾರಿ ಚಾಲಕನ ಅಜಾಗುರುಕತೆ: ಬೈಕ್ ಸವಾರ ಗಂಭೀರ: ರಿಕ್ಷಾಕ್ಕೆ ಹಾನಿ

ಮೂಲ್ಕಿ: ಲಾರಿ ಚಾಲಕನ ಅಜಾಗುರುಕತೆ: ಬೈಕ್ ಸವಾರ ಗಂಭೀರ: ರಿಕ್ಷಾಕ್ಕೆ ಹಾನಿ

ಮುಲ್ಕಿಯಲ್ಲಿ ಚಾಲಕನ ನಿರ್ಲಕ್ಷತನಕ್ಕೆ ಲಾರಿಯೊಂದು ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ ಘಟನೆ ನಡೆದಿದ್ದು, ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ರಿಕ್ಷಾ ಒಂದಕ್ಕೆ ಹಾನಿಯಾಗಿದೆ.

ಮೈನ್ಸ್ ಲಾರಿ ಹೆದ್ದಾರಿ ಬಿಟ್ಟು ಸೀದಾ ಸರ್ವಿಸ್ ರಸ್ತೆಗೆ ನುಗ್ಗಿದೆ. ಈ ವೇಳೆ ಬೈಕ್ ಹಾಗೂ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾಡ್ಜ್ ಒಂದರಲ್ಲಿ ವಾಚ್‌ಮೆನ್ ಆಗಿರುವ ಸಂಗಪ್ಪ ಮಗಳನ್ನು ಬಸ್ ಸ್ಟ್ಯಾಂಡ್ ಗೆ ಬಿಡಲು ಬಂದಿದ್ದು ಲಾರಿ ಗುದ್ದಿದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿದ್ದು. ಮಗಳು‌ ಸವಿತಾಗೆ ಸಣ್ಣ ಪುಟ್ಟ ಗಾಯ ಅಪಾಯ‌ದಿಂದ ಪಾರಾಗಿದ್ದಾರೆ.

ಅಲ್ಲದೆ ರಸ್ತೆ ಬದಿಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕರತ್ತ ಲಾರಿ ನುಗ್ಗಿ ಬಂದಿದೆ. ಕೂದಲೆಳೆ ಅಂತರದಿಂದ ಕೂಲಿ ಕಾರ್ಮಿಕರು ಪಾರಾಗಿದ್ದು, ಕರ್ತವ್ಯದಲ್ಲಿದ್ದ ಮಹಿಳೆ‌ ಪೊಲೀಸ್ ಸಿಬ್ಬಂದಿಗೂ‌ ಗಾಯವಾಗಿದೆ.ಮುಲ್ಕಿ ಠಾಣಾ ಪೊಲೀಸರು ಲಾರಿ ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ.

ರಾಜ್ಯ